EBM News Kannada
Leading News Portal in Kannada

ಹೂಡಿಕೆ ಟಿಪ್ಸ್; 1 ಕೋಟಿ ಸಂಪತ್ತು ಸಂಗ್ರಹಕ್ಕೆ 15X15X15 ಸೂತ್ರ – Kannada News | Investment Tips: Know of Earning 1 Cr Using 15X15X15 Rule

0


15X15X15 Rule: ಮ್ಯೂಚುವಲ್ ಫಂಡ್ ಎಸ್​ಐಪಿ ಸ್ಕೀಮ್ ಬಹಳ ಜನಪ್ರಿಯವಾಗಿದ್ದು, ಹೆಚ್ಚಿನ ಸಂದರ್ಭದಲ್ಲಿ ಉತ್ತಮ ಲಾಭ ತಂದುಕೊಡುತ್ತದೆ. ಈ ಯೋಜನೆ ಬಳಸಿ ಒಂದು ಕೋಟಿ ರೂ ಗಳಿಸಲು ಎಷ್ಟು ಹಣವನ್ನು ಎಷ್ಟು ವರ್ಷ ಹೂಡಿಕೆ ಮಾಡಬಹುದು ಎಂಬ ವಿವರ ಇದೆ.

ಷೇರುಗಳ ಮೇಲೆ ನೇರವಾಗಿ ಹೂಡಿಕೆ (Investment) ಮಾಡಿದರೆ ಹೆಚ್ಚಿನ ರಿಸ್ಕ್ ಇದ್ದೇ ಇರುತ್ತದೆ. ಅದೇ ರೀತಿ ಮ್ಯೂಚುವಲ್ ಫಂಡ್ (Mutual Fund) ಮೇಲಿನ ಹೂಡಿಕೆಯಲ್ಲಿಯೂ ರಿಸ್ಕ್ ಒಳಗೊಂಡಿದ್ದೇ ಇರುತ್ತದೆ. ಆದರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ಮ್ಯೂಚುಯಲ್ ಫಂಡ್ ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ ತಂದುಕೊಡಬಲ್ಲುದು. ಆದರೆ, ಹೂಡಿಕೆ ವೇಳೆ ಸಂಯಮ ಮುಖ್ಯ. ಕಿರು ಅವಧಿಯಲ್ಲಿ ಮಾರುಕಟ್ಟೆ ಏರಿಳಿತಕ್ಕೆ ಹೆದರಿ ಹೂಡಿಕೆ ಹಿಂಪಡೆದರೆ ನಷ್ಟದ ಸಾಧ್ಯತೆ ಹೆಚ್ಚು. ಹೀಗಾಗಿ, ಮ್ಯೂಚುವಲ್ ಫಂಡ್ ಅಥವಾ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ದೀರ್ಘಾವಧಿಯದ್ದಾಗಿರಬೇಕು.

ನೀವು 1 ಕೋಟಿ ರೂ ಗಳಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದರೆ ಅದನ್ನು ಸಾಕಾರಗೊಳಿಸಲು 15X15X15 ಸೂತ್ರ ನೆನಪಿಟ್ಟುಕೊಳ್ಳಬೇಕು. ನೀವು ತಿಂಗಳಿಗೆ 15,000 ರೂನಂತೆ ಕನಿಷ್ಠ 15 ವರ್ಷ ಹೂಡಿಕೆ ಮಾಡುತ್ತಾ ಹೋದರೆ 1 ಕೋಟಿ ರೂ ಸಂಗ್ರಹವಾಗುತ್ತದೆ. ಈ 15 ವರ್ಷದಲ್ಲಿ ನಿಮ್ಮ ಮ್ಯೂಚುವಲ್ ಫಂಡ್ ಎಸ್​ಐಪಿ ಯೋಜನೆ ವಾರ್ಷಿಕವಾಗಿ ಶೇ. 15ರ ದರದಲ್ಲಿ ಬೆಳೆಯುತ್ತಾ ಹೋದರೆ ಕೋಟ್ಯಾಧಿಪತಿ ನೀವಾಗಬಹುದು.

ಇದು ಪವರ್ ಆಫ್ ಕಾಂಪೌಂಡಿಂಗ್. ಅಂದರೆ ನಿಮ್ಮ ಹೂಡಿಕೆಗೆ ಸಿಗುವ ರಿಟರ್ನ್ ಎಲ್ಲವೂ ಕೂಡಿಕೊಳ್ಳುತ್ತಾ ನಿಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದರಿಂದ ನಿಮ್ಮ ವಾಸ್ತವ ಹೂಡಿಕೆಗಿಂತ ಕೆಲವಾರು ಪಟ್ಟು ಹೆಚ್ಚು ಹಣ ನಿಮ್ಮದಾಗುತ್ತದೆ.

ಉದಾಹರಣೆಗೆ, ನೀವು ತಿಂಗಳಿಗೆ 15,000 ರೂನಂತೆ 15 ವರ್ಷ ಕಾಲ ಒಟ್ಟು 27 ಲಕ್ಷ ರೂ ಕಟ್ಟಿರುತ್ತೀರಿ. ನಿಮ್ಮ ಮ್ಯೂಚುವಲ್ ಫಂಡ್ ಶೇ. 15ರ ದರದಲ್ಲಿ ಬೆಳೆದರೆ ಒಟ್ಟು ರಿಟರ್ನ್ 1.01 ಕೋಟಿ ಆಗುತ್ತದೆ. ಅಂದರೆ ನಿಮಗೆ 15 ವರ್ಷದಲ್ಲಿ 74 ಲಕ್ಷ ಲಾಭವಾಗುತ್ತದೆ.

ಒಂದು ವೇಳೆ ಎಸ್​ಐಪಿ ಶೇ. 12ರ ದರದಲ್ಲಿ ಬೆಳೆದರೆ ನಿಮ್ಮ 27 ಲಕ್ಷ ರೂ ಹೂಡಿಕೆಯು 75 ಲಕ್ಷ ರೂ ಆಗುತ್ತದೆ. ನಿಮ್ಮ ಸಂಪತ್ತುವೃದ್ಧಿ ಎಲ್ಲವೂ ಎಸ್​ಐಪಿ ವೃದ್ಧಿದರದ ಮೇಲೆ ಅವಲಂಬಿತವಾಗುತ್ತದೆ.

ತಾಜಾ ಸುದ್ದಿ

Leave A Reply

Your email address will not be published.