EBM News Kannada
Leading News Portal in Kannada

ಹಣಕಾಸು ಲೋಕದಲ್ಲಿ ವಿಸ್ಮಯಗೊಳಿಸುವ 8-4-3 ನಿಯಮ; ಶ್ರೀಮಂತರನ್ನಾಗಿಸುವ ಟ್ರಿಕ್, ಹಣದ ಪವರ್ ತಿಳಿಸುವ ಟ್ರಿಕ್ ಇದು – Kannada News | Know The 8 4 3 Rule In Money World; Power of Compounding That Grows Your Wealth

0


Power of Compounding: ಹಣದ ಸಂಪಾದನೆ ಜೊತೆಗೆ ಉಳಿಸಿದ ಹಣವನ್ನು ಬೆಳೆಸುವ ಹಣಕಾಸು ತಂತ್ರಗಳನ್ನು ಅರಿಯುವುದು ಮುಖ್ಯ. ಎಸ್​ಐಪಿಯಂತಹ ದೀರ್ಘಕಾಲೀನ ಹೂಡಿಕೆ ಯೋಜನೆಗಳಿಂದ ಹಣ ಬೆಳೆಯುವ ವೇಗ ವರ್ಷ ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ ಉದಾಹರಣೆ 8-4-3 ಸೂತ್ರ.

ಹಣ ಮಾಡಲು ಬಯಸದೇ ಇರುವ ವ್ಯಕ್ತಿ ಯಾರಾದರೂ ಇದ್ದಾರೆಯೇ? ಇಂದಿನ ಜೀವನದ ಅಗತ್ಯತೆಗಳಿಗೆ ಹಣ ಬಹಳ ಮುಖ್ಯ. ಅದರ ಸಂಪಾದನೆಗೆ ನಾವು ವಿವಿಧ ಕೆಲಸಗಳನ್ನು ಅರಸಿ ಹೋಗುತ್ತೇವೆ. ಹಣ ಸಂಪಾದನೆ ಮಾಡಿದಾಕ್ಷಣ ಸಿರಿತನ ಸಿಕ್ಕೋದಲ್ಲ. ನಾವು ಸಂಪಾದಿಸಿದ ಹಣ ಹೇಗೆ ಮುಂದುವರಿಯುತ್ತದೆ ಎಂಬುದು ನಮ್ಮ ಶ್ರೀಮಂತಿಕೆಯನ್ನು ನಿರ್ಧರಿಸುತ್ತದೆ. ನಾವು ಉಳಿಸಿದ ಹಣವನ್ನು ಬೆಳೆಸುವ ಹಲವು ಮಾರ್ಗಗಳುಂಟು. ಕೆಲವೊಂದು ವೇಗವಾಗಿ ಬೆಳೆಯುತ್ತವೆ, ಕೆಲವು ನಿಧನವಾಗಿ ರಿಟರ್ನ್ ಕೊಡುತ್ತವೆ. ಇನ್ನೂ ಕೆಲ ತಂತ್ರಗಳನ್ನು (Money Tricks) ಅನುಸರಿಸಿದರೆ ಹಣವನ್ನು ಇನ್ನೂ ಬೇಗ ಬೆಳೆಸಬಹುದು. ಅಂಥದ್ದೊಂದು ತಂತ್ರ ಅಥವಾ ಸೂತ್ರ 8-4-3.

ನೀವು ಎಸ್​ಐಪಿ ಬಗ್ಗೆ ಕೇಳಿರಬಹುದು. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಇದು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಾಗ ಸಾಕಷ್ಟು ಆದಾಯ ಸೃಷ್ಟಿಸುವ ಯೋಜನೆ. ಮ್ಯೂಚುವಲ್ ಫಂಡ್​ನ ಎಸ್​ಐಪಿಗಳು ಈಗೀಗ ಬಹಳ ಜನಪ್ರಿಯತೆ ಗಳಿಸುತ್ತಿವೆ. ಇಲ್ಲಿ ನಮ್ಮ ಹಣವು ಕಾಂಪೌಂಡಿಂಗ್ ವಿಧಾನದಲ್ಲಿ ಬೆಳೆಯುತ್ತಾ ಹೋಗುತ್ತದೆ. ಅಂದರೆ ನೀವು ಹೂಡುವ ಹಣಕ್ಕೆ ಬರುವ ಆದಾಯ ಎಲ್ಲವೂ ಹೂಡಿಕೆ ಜೊತೆಯೇ ಸೇರುತ್ತಾ, ಆ ಹಣವೂ ಬೆಳೆಯುತ್ತಾ ಹೋಗುವುದು ಕಾಂಪೌಂಡಿಂಗ್ ಸೂತ್ರ. ಕಾಂಪೌಂಡ್ ಇಂಟರೆಸ್ಟ್ ಬೆಳೆಯುವಂತೆಯೇ ಇದೂ ಕೂಡ.

8-4-3 ಸೂತ್ರ ಏನು?

ನೀವು ಮ್ಯೂಚುವಲ್ ಫಂಡ್​ನ ಎಸ್​ಐಪಿಯಲ್ಲಿ ತಿಂಗಳಿಗೆ 30,000 ರೂ ಹೂಡಿಕೆ ಮಾಡಲು ನಿರ್ಧರಿಸುತ್ತೀರಿ ಎಂದಿಟ್ಟುಕೊಳ್ಳಿ. ಈ ಯೋಜನೆಯು ನಿಮಗೆ ವರ್ಷಕ್ಕೆ ಶೇ. 12ರಷ್ಟು ರಿಟರ್ನ್ ಕೊಡುತ್ತದೆ ಎಂದು ಕಲ್ಪಿಸಿ. ನೀವಂದುಕೊಂಡಂತೆ ಅದು 12 ಪ್ರತಿಶತದ ದರದಲ್ಲಿ ಬೆಳೆದಿದ್ದೇ ಆದಲ್ಲಿ ಮತ್ತು ನೀವು ಪ್ರತೀ ತಿಂಗಳು ತಪ್ಪದೇ 30,000 ರೂ ಹೂಡಿಕೆ ಮಾಡುತ್ತಾ ಹೋದಲ್ಲಿ ನಿಮ್ಮ ಸಂಪತ್ತು 50 ಲಕ್ಷ ರೂ ಆಗಲು 8 ವರ್ಷ ಬೇಕು. ಈ ಲಾಭ ಸಮಾಧಾನ ತರಲಿಲ್ಲವೆಂದು ನೀವು ಅಲ್ಲಿಗೇ ಹೂಡಿಕೆ ನಿಲ್ಲಿಸಿಬಿಟ್ಟರೆ ಮುಂದಿನ ಭರ್ಜರಿ ಸಂಪತ್ತು ಶೇಖರಣೆಯ ಅವಕಾಶ ತಪ್ಪಿಸಿಕೊಳ್ಳುತ್ತೀರಿ.

ನೀವು 8 ವರ್ಷದ ಬಳಿಕವೂ ಹೂಡಿಕೆ ಮುಂದುವರಿಸಿದರೆ ಮುಂದಿನ 50 ವರ್ಷ ಹಣ ಗಳಿಕೆಯಾಗಲು 4 ವರ್ಷ ಬೇಕು. ಹಾಗೆಯೇ ಮುಂದುವರಿದರೆ, ಇನ್ನಷ್ಟು 50 ಲಕ್ಷ ಸೇರಲು ಬೇಕಾದ ವರ್ಷ 3 ಮಾತ್ರ. ನೀವು 20 ವರ್ಷದ ಬಳಿಕವೂ 30,000 ರೂ ಹಣವನ್ನು ತಿಂಗಳಿಗೆ ಸೇರಿಸುತ್ತಾ ಹೋದರೆ ಪ್ರತೀ ವರ್ಷವೂ 50 ಲಕ್ಷ ಸೇರುತ್ತಾ ಹೋಗುತ್ತದೆ. ಅಂದರೆ ನಿಮ್ಮ ಹಣಕ್ಕೆ ಲಾಭ ಸಿಗುವ ವೇಗ ಹೆಚ್ಚುತ್ತಲೇ ಹೋಗುತ್ತದೆ. ಇದು ಪವರ್ ಆಫ್ ಕಾಂಪೌಂಡಿಂಗ್.

ತಾಜಾ ಸುದ್ದಿ

Leave A Reply

Your email address will not be published.