Ultimate magazine theme for WordPress.

ಭೋಪಾಲ್‌ನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ಬೆಂಗಳೂರು ರೈಲ್ವೆ ಪೊಲೀಸರು

0

ಬೆಂಗಳೂರು, ನವೆಂಬರ್ 11: ಭೋಪಾಲ್‌ನಲ್ಲಿ ಕಾಣೆಯಾಗಿದ್ದ 16 ವರ್ಷದ ಬಾಲಕಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಬಾಲಕಿ ಭೋಪಾಲ್‌ನ ಕಮಲಾನಗರದಿಂದ ನಾಪತ್ತೆಯಾಗಿದ್ದಳು, 5 ತಾಸಿನೊಳಗೆ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ನವದೆಹಲಿ-ಬೆಂಗಳೂರು ಫೆಸ್ಟಿವಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಿಂದ ಯಲಹಂಕ ಸಮೀಪ ಆಕೆಯನ್ನು ರಕ್ಷಿಸಿದ್ದಾರೆ.

ಐಪಿಸಿಯ ಸೆಕ್ಷನ್ 363 ರ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ಆಕೆಯ ಪೋಷಕರು ಭಾನುವಾರ ಭೋಪಾಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ ಮತ್ತು ಜಬಲ್ಪುರದ ಆರ್ ಪಿ ಎಫ್ ವಲಯ ಕಚೇರಿ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿತ್ತು.

Leave A Reply

Your email address will not be published.