EBM News Kannada
Leading News Portal in Kannada

ಲೌಕ್ ಡೌನ್ ಹಿನ್ನಲೆ: ವಾಹನ ಮಾಲೀಕರಿಗೆ ಮತ್ತಷ್ಟು ವಿನಾಯ್ತಿಗಳನ್ನು ನೀಡಿದ ಕೇಂದ್ರ ಸರ್ಕಾರ

0

ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ದೇಶದ ಜನತೆಗೆ ಹಲವಾರು ವಿನಾಯ್ತಿಗಳನ್ನು ನೀಡಿದೆ.
ಬ್ಯಾಂಕ್‌ಗಳ ಸಾಲ ಮರುಪಾವತಿಯಿಂದ ಹಿಡಿದು ಹಲವಾರು ವಿನಾಯ್ತಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರವು ಭಾರೀ ನಷ್ಟ ಅನುಭವಿಸುತ್ತಿರುವ ಆಟೋ ಉದ್ಯಮದ ಸುಧಾರಣೆಗೂ ಕೆಲವು ಮಹತ್ವದ ಕ್ರಮಗಳನ್ನು ಜಾರಿಗೆ ತಂದಿದೆ. ವಾಹನಗಳ ಸಾಲದ ಇಎಂಐ ಮರುಪಾವತಿ, ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಪ್ರಕಟಿಸಿದ್ದು, ಇದೀಗ ವಾಹನ ವಿಮೆ ಅವಧಿಯನ್ನು ಸಹ ವಿಸ್ತರಿಸಿದೆ.

ಹೌದು, ಬಹುತೇಕ ವಾಹನ ಮಾಲೀಕರು ಮಾರ್ಚ್ ಅಂತ್ಯಕ್ಕೆ ಕೊನೆಗೂಳ್ಳುವಂತೆ ವಿಮೆ ಖರೀದಿ ಮಾಡಿರುತ್ತಾರೆ. ಆದ್ರೆ ತುರ್ತು ಪರಿಸ್ಥಿತಿಯ ನಡುವೆ ವಿಮೆ ಖರೀದಿ ಪ್ರಕ್ರಿಯೆಯು ಕುಂಠಿತವಾಗಿದ್ದು, ಕೇಂದ್ರ ಸರ್ಕಾರವು ಈ ಹಿನ್ನಲೆಯಲ್ಲಿ ಕೆಲವು ವಿನಾಯ್ತಿಗಳನ್ನು ನೀಡಿದೆ. ಮಾರ್ಚ್ ಅಂತ್ಯಕ್ಕೆ ಅಥವಾ ಎಪ್ರಿಲ್ ಅವಧಿಯಲ್ಲಿ ಮುಕ್ತಾಯುಗೊಳ್ಳುವ ವಿಮಾ ಪಾಲಿಸಿಯ ಅವಧಿಯನ್ನು ಇದೇ ತಿಂಗಳ 21ರ ತನಕ ವಿಸ್ತರಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ವಿಮೆ ಇಲ್ಲದೇ ವಾಹನಗಳನ್ನು ಹೊರತೆಗೆದರೂ ಯಾವುದೇ ಭಯಪಡಬೇಕಿಲ್ಲ.

ಆದರೆ ವಾಹನ ವಿಮೆ ಖರೀದಿಗಾಗಿ ಲಾಕ್ ಡೌನ್ ಉಲ್ಲಂಘನೆ ಮಾಡದಿರುವಂತೆ ಎಚ್ಚರಿಸಿರುವ ಕೇಂದ್ರ ಸರ್ಕಾರವು ಅನಾವಶ್ಯಕವಾಗಿ ಮನೆಹೊರಹೊಗದಂತೆ ಮನವಿ ಮಾಡಿದ್ದು, ಅವಧಿ ಮುಗಿದರೂ ವಾಹನ ವಿಮೆಯನ್ನು ತಡವಾಗಿ ಪಡೆದುಕೊಳ್ಳಲು ಈ ಸಹಕಾರಿಯಾಗಿದೆ. ಇದಲ್ಲದೇ ಫೆಬ್ರವರಿ 1ಕ್ಕೆ ರಿಜಿಸ್ಟ್ರೇಶನ್ ಹಾಗೂ ಲೈಸೆನ್ಸ್ ಅವಧಿ ಮುಗಿದಿರುವ ಎಲ್ಲಾ ವಾಹನಗಳಿಗೂ ಜೂನ್ 30ರವರೆಗೆ ವ್ಯಾಲಿಡಿಟಿ ವಿಸ್ತರಿಸಲಾಗಿದ್ದು, ತುರ್ತು ಸೇವೆಯ ವಾಹನಗಳು, ಟ್ರಕ್‌ಗಳು ಹಾಗೂ ಸರಕುಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ತೊಂದರೆ ಎದುರಿಸದೆ ಸಂಚರಿಸುವಂತಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಬರುವ ಫಿಟ್‌ನೆಸ್ ಸರ್ಟಿಫಿಕೇಟ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರ ದಾಖಲೆಗಳು ಇವುಗಳಲ್ಲಿ ಸೇರಿವೆ. ಈ ಹೊಸ ನಿಯಮವನ್ನು ತಕ್ಷಣದಿಂದ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ.

Leave A Reply

Your email address will not be published.