EBM News Kannada
Leading News Portal in Kannada

9 ಸೀಟುಗಳ ಮಹೀಂದ್ರ ಟಿಯುವಿ300 ಪ್ಲಸ್ ಭರ್ಜರಿ ಎಂಟ್ರಿ

0

ಹೊಸದಿಲ್ಲಿ: ದೊಡ್ಡ ಕುಟುಂಬಗಳನ್ನು ಗುರಿಯಾಗಿರಿಸಿಕೊಂಡಿರುವ ದೇಶದ ಉಪಯುಕ್ತ ವಾಹನಗಳ ದೈತ್ಯ ನಿರ್ಮಾಣ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ದೆಯು, ಒಂಬತ್ತು ಸೀಟುಗಳ ಸಾಮರ್ಥ್ಯದ ಅತಿ ನೂತನ ಟಿಯುವಿ300 ಪ್ಲಸ್ ಎಸ್‌ಯುವಿ ವಾಹನವನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 9.47 ಲಕ್ಷ ರೂ. (ಎಕ್ಸ್ ಶೋ ರೂಂ ಮುಂಬಯಿ)

ಮೂರು ವೆರಿಯಂಟ್: ಪಿ4, ಪಿ6 ಮತ್ತು ಪಿ8

10 ಲಕ್ಷ ರೂ.ಗಳ ಬೆಲೆ ಪರಿಧಿಯಲ್ಲಿ ಸಮಕಾಲೀನ, ಪವರ್‌ಫುಲ್ ಹಾಗೂ ಹೊಂದಿಕೊಳ್ಳುವ ಸಂಪೂರ್ಣ ಎಸ್‌ಯುವಿ ಕೊರತೆಯನ್ನು ನೂತನ ಟಿಯುವಿ300 ನೀಗಿಸಲಿದೆ.

ಎಂಜಿನ್:
2.2 ಲೀಟರ್,
120PS (ಸ್ಟ್ಯಾಂಡರ್ಡ್‌ಗಿಂತಲೂ 20 ಅಶ್ವಶಕ್ತಿ ಹೆಚ್ಚು)
mHAWKD120 ಡೀಸೆಲ್ ಎಂಜಿನ್ (ಸ್ಕಾರ್ಪಿಯೊಗೆ ಸಮಾನ)

ಗೇರ್ ಬಾಕ್ಸ್: ಆರು ಸ್ಪೀಡ್ ಮ್ಯಾನುವಲ್
ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ

ಅಂತೆಯೇ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಹಾಗೂ ದೊಡ್ಡದಾದ 16 ಇಂಚುಗಳ ಅಲಾಯ್ ಚಕ್ರಗಳನ್ನು ಪಡೆಯಲಿದೆ.

ಮಹೀಂದ್ರ ಅಧೀನತೆಯಲ್ಲಿರುವ ಇಟಲಿಯ ಡಿಸೈನ್ ಸಂಸ್ಥೆ ಪಿನಿನ್‌ಫರಿನಾ ಕಾರಿನ ಒಳಮೈಯನ್ನು ವಿನ್ಯಾಸಗೊಳಿಸಿದೆ. ಫಾಕ್ಸ್ ಲೆಥರ್ ಸೀಟು, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಫೋನ್ ಕಂಟ್ರೋಲ್, ಆರ್ಮ್‌ರೆಸ್ಟ್, ಹಿಂದುಗಡೆ ಮಡಚಬಹುದಾದ ಆಸನ ವ್ಯವಸ್ಥೆಯನ್ನು ಹೊಂದಿದೆ.

ಏಳು ಇಂಚುಗಳ ಟಚ್‌ಸ್ಕ್ರೀನ್, ಫೋರ್ ಸ್ಪೀಕರ್ಸ್ ಪ್ಲಸ್ ಟು ಟ್ವೀಟರ್ಸ್ ಸೌಂಡ್ ಸಿಸ್ಟಂ, ಬ್ಲೂಸೆನ್ಸ್ ಆ್ಯಪ್, ಜಿಪಿಎಸ್ ನೇವಿಗೇಷನ್, ಇಕೊ ಮೋಡ್, ಡಿಫಾಗರ್, ವಾಶ್, ವೈಪ್ ಹಾಗೂ ಇಂಟೆಲ್ಲಿಪಾರ್ಕ್ ರಿವರ್ಸ್ ಅಸಿಸ್ಟ್ ವ್ಯವಸ್ಥೆಯಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್, ಹಜಾರ್ಡ್ ಲೈಟ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.

2015 ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿರುವ ಮಹೀಂದ್ರ ಟಿಯುವಿ300 ಈಗಾಗಲೇ 80,000ರಷ್ಟು ಎಸ್‌ಯುವಿಗಳು ರಸ್ತೆಯನ್ನು ಪ್ರವೇಶಿಸಿವೆ.

ಬಣ್ಣಗಳು: ಸಿಲ್ವರ್, ವೈಟ್, ರೆಡ್, ಬ್ಲ್ಯಾಕ್ ಮತ್ತು ಆರೆಂಜ್.

Leave A Reply

Your email address will not be published.