ಅಮೆಜಾನ್ ಸೇಲ್: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಟಾಪ್ 5 ಸ್ಮಾರ್ಟ್ಫೋನ್ಸ್ ನೋಡಿ – Kannada News | Top five smartphones under Rs. 10000 with big deals currently available on Amazon Great Freedom Festival sale
Amazon Great Freedom Festival sale 2023: ನೀವು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದೇ ಸರಿಯಾದ ಸಮಯ. ಪ್ರಸ್ತುತ ಅಮೆಜಾನ್ನಲ್ಲಿ 10,000 ರೂ. ಒಳಗೆ ಲಭ್ಯವಿರುವ ಆಕರ್ಷಕ ಫೋನ್ಗಳು ಯಾವುವು ಎಂಬುದನ್ನು ನೋಡೋಣ.
10,000 ರೂ. ಒಳಗಿನ ಸ್ಮಾರ್ಟ್ಫೋನ್ ಬೇಕೇ? ಸದ್ಯ ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ನಲ್ಲಿ (Amazon) ನಡೆಯುತ್ತಿರುವ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2023 ರಲ್ಲಿ (Great Freedom Festival sale) ನೀವು ಖರೀದಿಸಬಹುದು. ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿರುವ ಈ ಮೇಳವು ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು (Smartphones), ಲ್ಯಾಪ್ಟಾಪ್ಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ ವಿಶೇಷ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಕೂಡ ಲಭ್ಯವಿದೆ.
ನೀವು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದೇ ಸರಿಯಾದ ಸಮಯ. ಪ್ರಸ್ತುತ ಅಮೆಜಾನ್ನಲ್ಲಿ 10,000 ರೂ. ಒಳಗೆ ಲಭ್ಯವಿರುವ ಆಕರ್ಷಕ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.
ಭಾರತದಲ್ಲಿ ಕಡಿಮೆ ಬೆಲೆಗೆ ಮತ್ತೊಂದು 5G ಸ್ಮಾರ್ಟ್ಫೋನ್ ಲಾಂಚ್: ಕೇವಲ 10,999 ರೂ.
ನೋಕಿಯಾ C32 (4GB, 128GB):
ಅಮೆಜಾನ್ ಮಾರಾಟದಲ್ಲಿ, ನೀವು ನೋಕಿಯಾ C32 ಫೋನನ್ನು ಕೇವಲ 9,090 ರೂ. ಗೆ ಪಡೆದುಕೊಳ್ಳಬಹುದು. ಇದು 5,000mAh ಬ್ಯಾಟರಿಯನ್ನು ಹೊಂದಿದೆ, Unisoc ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ 5000 ರೂ. ವರೆಗೆ ಉಳಿಸಬಹುದು. ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಎಕ್ಸ್ಚೇಂಜ್ ಆಫರ್ ಕೂಡ ಇದೆ. ನಿಮ್ಮ ಹಳೆಯ ಸ್ಮಾರ್ಟ್ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ನೀವು 8550 ರೂ. ವರೆಗೆ ರಿಯಾಯಿತಿ ಪಡೆಯಬಹುದು.
ಟೆಕ್ನೋ ಸ್ಪಾರ್ಕ್ 9 (4GB, 64GB):
ಅಮೆಜಾನ್ ಸೇಲ್ನಲ್ಲಿ ಟೆಕ್ನೋ ಸ್ಪಾರ್ಕ್ 9 ಫೋನ್ ಸಹ ಅದ್ಭುತವಾದ ಡೀಲ್ನೊಂದಿಗೆ 7099 ರೂ. ಗೆ ಲಭ್ಯವಿದೆ. ಇದು ಮೀಡಿಯಾಟೆಕ್ ಹಿಲಿಯೋ G37 SoC ಜೊತೆಗೆ 5000mAh ಬ್ಯಾಟರಿಯನ್ನು ಒಳಗೊಂಡಿದೆ ಮತ್ತು 13MP ಪ್ರೈಮರಿ ಕ್ಯಾಮೆರಾ ಜೊತೆಗೆ 8MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 6700 ರೂ. ಗಳ ವಿನಿಮಯ ಕೊಡುಗೆಯನ್ನು ಹೊಂದಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.
ರೆಡ್ಮಿ 12C:
ನೀವು ಈ ಸ್ಮಾರ್ಟ್ಫೋನ್ ಅನ್ನು ಅಮೆಜಾನ್ ಮಾರಾಟದಲ್ಲಿ ರೂ. 7699 ಕ್ಕೆ ಖರೀದಿಸಬಹುದು. ರೆಡ್ಮಿ 12C ಮೇಲೆ ಅಮೆಜಾನ್ ಶೇ. 45 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದು 5,000 mAh ಬ್ಯಾಟರಿಯನ್ನು ಹೊಂದಿದೆ, ಮೀಡಿಯಾಟೆಕ್ ಹಿಲಿಯೋ G85 SoC, 5MP ಸೆಲ್ಫಿ ಕ್ಯಾಮೆರಾದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ. 6300 ರೂ. ವರೆಗಿನ ವಿನಿಮಯ ಕೊಡುಗೆಯನ್ನು ಪಡೆಯುವ ಮೂಲಕ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ M13 (4GB, 64GB):
2023 ರ ಅಮೆಜಾನ್ ಮಾರಾಟದಲ್ಲಿ ಗ್ಯಾಲಕ್ಸಿ M13 ಬೆಲೆ 9649ರೂ. ಇದು 6,000 mAh ಬ್ಯಾಟರಿಯನ್ನು ಹೊಂದಿದೆ, ಎಕ್ಸಿನೊಸ್ 850 SoC, 50MP+5MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಅಮೆಜಾನ್ ಪೇ, ICICI ಕ್ರೆಡಿಟ್ ಕಾರ್ಡ್ ಬಳಸಿ 434 ರೂ. ರಿಯಾಯಿತಿ ಪಡೆಯಬಹುದು. ಇದಲ್ಲದೆ, 9100 ರೂ. ವರೆಗಿನ ವಿನಿಮಯ ಕೊಡುಗೆಯನ್ನು ಬಳಸಿಕೊಂಡು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
ರಿಯಲ್ ಮಿ ನಾರ್ಜೊ 50i ಪ್ರೈಮ್ (4GB, 64GB):
ಅಮೆಜಾನ್ ಫ್ರೀಡಂ ಫೆಸ್ಟಿವಲ್ ಮಾರಾಟದಲ್ಲಿ ಈ ಸ್ಮಾರ್ಟ್ಫೋನ್ ಬೆಲೆ ಕೇವಲ 7599ರೂ. ಇದು 5,000 mAh ಬ್ಯಾಟರಿಯನ್ನು ಹೊಂದಿದೆ, Unisoc Tiger T61 SoC, 5MP ಸೆಲ್ಫಿ ಕ್ಯಾಮೆರಾದೊಂದಿಗೆ 8MP ಸಿಂಗಲ್ ರಿಯರ್ ಕ್ಯಾಮೆರಾದೊಂದಿಗೆ ಬರುತ್ತದೆ. 7200 ರೂ. ವರೆಗಿನ ವಿನಿಮಯ ಕೊಡುಗೆ ಸಹ ಲಭ್ಯವಿದೆ.