Ultimate magazine theme for WordPress.

5ನೇ ಲಾಕ್‌ಡೌನ್‌ನಲ್ಲಿ ಯಾವುದಕ್ಕೆ ವಿನಾಯಿತಿ? ಸುಳಿವು ನೀಡಿದ ಡಿಸಿಎಂ

0

ಬೆಂಗಳೂರು, ಮೇ 28: ಈ ವಾರಾಂತ್ಯಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್‌ ಮುಗಿಯಲಿದೆ. ಅಲ್ಲಿಂದ ಮತ್ತೊಂದು ಹಂತದ ಲಾಕ್‌ಡೌನ್‌ ಆರಂಭವಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಏಕಂದ್ರೆ, ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ, ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ 5ನೇ ಲಾಕ್‌ಡೌನ್‌ ಮಾಡುವುದು ಅನಿವಾರ್ಯ ಎನ್ನಲಾಗುತ್ತಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತಪಡಿಸಿಲ್ಲ. ಕೇಂದ್ರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ. ಈ ನಡುವೆ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಜೂನ್ 1ರ ನಂತರ ರಾಜ್ಯದ ಪರಿಸ್ಥಿತಿ ಹೇಗಿರಲಿದೆ ಎಂದು ಸುಳಿವು ನೀಡಿದ್ದಾರೆ.

ನಾಲ್ಕು ಹಂತದ ಲಾಕ್ ಡೌನ್ ನಲ್ಲಿ ಹಲವು ವಿನಾಯತಿ ಕೊಡಲಾಗಿದೆ. 5ನೇ ಹಂತದ ಲಾಕ್ ಡೌನ್ ನಲ್ಲಿಯೂ ಕೆಲವು ವಿನಾಯಿತಿ ಕೋರಿ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಜೂನ್ 1ರ ನಂತರ ಮತ್ತಷ್ಟು ಕ್ಷೇತ್ರಗಳಿಗೆ ವಿನಾಯಿತಿ ಸಿಗುವುದು ಬಹುತೇಕ ಖಚಿತ.

ನಾಲ್ಕನೇ ಲಾಕ್‌ಡೌನ್‌ನಲ್ಲಿ ಹಲವು ಕ್ಷೇತ್ರಗಳಿಗೆ ಕೆಲಸ ಮಾಡಲು ಅವಕಾಶ ಕೊಡಲಾಗಿತ್ತು. ಈ ಬಾರಿ ಮಾಲ್, ರೆಸ್ಟೋರೆಂಟ್ ಗಳ ಓಪನ್ ಮಾಡಲು ಮನವಿ ಬಂದಿದ್ದೆ. ಶಾಲಾ-ಕಾಲೇಜುಗಳ ಓಪನ್ ಗೂ ಮನವಿ ಬಂದಿದೆ. ಜೂನ್ 1 ರಿಂದ ವಿವಿಧ ಕ್ಷೇತ್ರಗಳಲ್ಲಿ ಸಡಿಲಿಕೆ ಕೊಡಬೇಕು ಎಂಬ ಒತ್ತಾಯ ಬಂದಿದೆ. ಆದರೆ, ಸಿನಿಮಾ, ಮಾಲ್ ಬಿಟ್ಟು ಬಾಕಿ ಕ್ಷೇತ್ರದಲ್ಲಿ ಸಡಿಲಗೊಳಿಸುವ ಒತ್ತಾಯ ಇದೆ’ ಎಂದು ಡಿಸಿಎಂ ಹೇಳಿದ್ದಾರೆ.

Leave A Reply

Your email address will not be published.