Ultimate magazine theme for WordPress.

ಜೂ 20 ಟೀಂ ಇಂಡಿಯಾಗೆ ಅದೃಷ್ಟದ ದಿನ; ಇದೇ ದಿನ ಪಾದಾರ್ಪಣೆ ಮಾಡಿದ 3 ಸ್ಟಾರ್ ಆಟಗಾರರು ಯಾರು ಗೊತ್ತಾ!

0

ಬೆಂಗಳೂರು: ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಟೀಂ ಇಂಡಿಯಾಕ್ಕೆ ವರವಾಗಿ ಪರಿಣಮಿಸಿದ ಆಟಗಾರರ ಪೈಕಿ ಖ್ಯಾತ ಆಟಗಾರರು ಜೂನ್ 20ರಂದು ತಂಡಕ್ಕೆ ಪಾದಾರ್ಪಣೆ ಮಾಡಿರುವುದು ವಿಶೇಷ.

ಹೌದು ಟೀಂ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಸೌರವ್ ಗಂಗೂಲಿ, ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಇದೇ ಜೂನ್ 20ರಂದು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ 1996ರಲ್ಲಿ ಹಾಗೂ ವಿರಾಟ್ ಕೊಹ್ಲಿ 2011ರಲ್ಲಿ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಜೂನ್ 20ರಂದು ಪಾದಾರ್ಪಣೆ ಮಾಡಿದ್ದರು.

ಮತ್ತೊಂದು ವಿಶೇಷ ಸಂಗತಿಯೆಂದರೆ ಈ ಮೂವರು ಕ್ರಿಕೆಟಿಗರೂ ಟೀಂ ಇಂಡಿಯಾದ ನಾಯಕರಾಗಿದ್ದರು. ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಗಂಗೂಲಿ 131 ರನ್ ಶತಕ ಸಿಡಿಸಿ ಸಂಭ್ರಮಿಸಿದ್ದರು. ದ್ರಾವಿಡ್ 95 ರನ್ ಸಿಡಿಸಿ 5 ರನ್ ಗಳಿಂದ ಶತಕ ವಂಚಿತರಾಗಿದ್ದರು.

ಇ್ನು ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಬೀನಾ ಪಾರ್ಕ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯದಲ್ಲಿ ಕೊಹ್ಲಿ 4 ಹಾಗೂ 15 ರನ್ ಮಾತ್ರ ಸಿಡಿಸಿದ್ದರು.

ಸೌವರ್ ಗಂಗೂಲಿ 113 ಟೆಸ್ಟ್ ಪಂದ್ಯ ಪೈಕಿ 7,712 ರನ್, ದ್ರಾವಿಡ್ 164 ಪಂದ್ಯ ಪೈಕಿ 13,288 ಹಾಗೂ ವಿರಾಟ್ ಕೊಹ್ಲಿ 66 ಪಂದ್ಯ ಪೈಕಿ 5554 ರನ್ ಬಾರಿಸಿದ್ದಾರೆ.

Leave A Reply

Your email address will not be published.