Ultimate magazine theme for WordPress.

10 ಸಾವಿರ ಸೈನಿಕರನ್ನು ವಾಷಿಂಗ್ಟನ್ ನಲ್ಲಿ ನಿಯೋಜಿಸಲು ಬಯಸಿದ್ದರಂತೆ ಟ್ರಂಪ್.!

0

ವಾಷಿಂಗ್ಟನ್, ಜೂನ್ 8: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ವಾಷಿಂಗ್ಟನ್ ನಲ್ಲಿ 10 ಸಾವಿರ ಸೈನಿಕರನ್ನು ನಿಯೋಜಿಸುವಂತೆ ತಮ್ಮ ಸಲಹೆಗಾರರಿಗೆ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಆದರೆ, ಸೈನಿಕರ ನಿಯೋಜನೆಗೆ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಜನರಲ್ ಮಾರ್ಕ್ ಮಿಲ್ಲೆ ಮತ್ತು ಅಟಾರ್ನಿ ಜನರಲ್ ವಿಲಿಯಂ ಬಾರ್ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಳಿಕ ಪೆಂಟಗನ್ ಶಿಫಾರಸ್ಸು ಮಾಡಿದಂತೆ ಶಾಂತಿ ಕಾಪಾಡಲು ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಲಾಗಿತ್ತು.

ಪ್ರತಿಭಟನೆಯನ್ನು ಹತ್ತಿಕ್ಕಲು ಮಿಲಿಟರಿ ನಿಯೋಜಿಸುವುದಾಗಿ ಹೇಳಿದ್ದ ಡೊನಾಲ್ಡ್ ಟ್ರಂಪ್ ವಿರುದ್ದ ಮಿಲಿಟರಿ ಅಧಿಕಾರಿಗಳೂ ಸೇರಿದಂತೆ ಹಲವರು ಖಂಡಿಸಿದ್ದರು.

ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಟ್ರಂಪ್ ರವರ ಮಿಲಿಟರಿ ನಿಯೋಜನೆಯ ನಿರ್ಧಾರದ ಕುರಿತು ಸಾರ್ವಜನಿಕವಾಗಿ ಖಂಡಿಸಿದ್ದರು. ಇದಾದ ಬಳಿಕ ಮಾರ್ಕ್ ಎಸ್ಪರ್ ಮೇಲೆ ಡೊನಾಲ್ಡ್ ಟ್ರಂಪ್ ಕೆಂಡಕಾರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಕ್ ಎಸ್ಪರ್ ಮೇಲೆ ಡೊನಾಲ್ಡ್ ಟ್ರಂಪ್ ಕುಪಿತಗೊಂಡಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಬಹುದು ಎಂದು ಊಹಿಸಲಾಗಿತ್ತು. ಆದ್ರೆ, ”ಮಾರ್ಕ್ ಎಸ್ಪರ್ ಮೇಲೆ ಟ್ರಂಪ್ ಗೆ ನಂಬಿಕೆ ಇದೆ” ಎಂದು ವೈಟ್ ಹೌಸ್ ವಕ್ತಾರ ತಿಳಿಸಿದ್ದಾರೆ.

Leave A Reply

Your email address will not be published.