ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರು ಪಾಲಿಗೆ ಮೇ 26 ಮಹತ್ವದ ದಿನ ಆಗಲಿದೆ. ಯಾಕಂದ್ರೆ ಇಂದು 1 ಸಾವಿರ ಮಂದಿಯ ಕೊರೊನಾ ವೈರಸ್ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ. ಹಾಗಾಗಿ, ರಾಜ್ಯದಲ್ಲಿ ಇಂದು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದ್ಯಾ ಎಂಬ ಆತಂಕ ಕಾಡುತ್ತಿದೆ. ಎರಡ್ಮೂರು ವಾರಗಳಿಂದ ಬೆಂಗಳೂರಿನಲ್ಲಿ ಹೆಚ್ಚು ಕೊವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ.
ಮಧ್ಯಾಹ್ನದ ಒಂದು ಬ್ಯಾಚ್ನಲ್ಲಿ ಹಾಗೂ ಸಂಜೆ ಇನ್ನೊಂದು ಬ್ಯಾಚ್ನಲ್ಲಿ ವರದಿ ಬರಲಿದೆ ಎನ್ನಲಾಗಿದೆ. ಈ ಹಿನ್ನೆಲೆ ಕೊರೋನಾ ಶಂಕಿತರ ವರದಿಗೆ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಬೆಂಗಳೂರು ಹೊರತು ಪಡಿಸಿ ಇನ್ನುಳಿದಂತೆ ಬೇರೆ ಜಿಲ್ಲೆಗಳಿಂದಲೂ ಹಲವರ ವರದಿ ಬರಲಿದೆ ಎಂದು ಬೆಂಗಳೂರು DHO ಗುಳೂರು ಶ್ರೀನಿವಾಸ್ ಹೇಳಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಬೆಂಗಳೂರಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದೆ. ಕೊರನಾ ವೈರಸ್ ನಿಯಂತ್ರಣೆ ಮಾಡುತ್ತಿರುವ ದೇಶದ ನಾಲ್ಕು ಮಾದರಿ ನಗರಗಳನ್ನು ಗುರುತಿಸಲಾಗಿದೆ. ಅದರಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಈ ಫಲಿತಾಂಶಕ್ಕೆ ರಾಜ್ಯದ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.