Ultimate magazine theme for WordPress.

1 ಮಿಲಿಯನ್ ಕೊರೊನಾ ಲಸಿಕೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಕೇಳಿದ ದಕ್ಷಿಣ ಆಫ್ರಿಕಾ

0

ಫೆಬ್ರವರಿ ಆರಂಭದಲ್ಲಿ ಭಾರತ ಕಳುಹಿಸಿದ್ದ ಒಂದು ಮಿಲಿಯನ್ ಕೊರೊನಾ ಲಸಿಕೆಗಳನ್ನು ಹಿಂಪಡೆಯುವಂತೆ ಸೆರಂ ಇನ್‌ಸ್ಟಿಟ್ಯೂಟ್‌ಗೆ ದಕ್ಷಿಣ ಆಫ್ರಿಕಾ ಕೇಳಿದೆ. ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ತಡೆಹಿಡಿಯುವಂತೆ ಹೇಳಿರುವ ಕಾರಣ ಒಂದು ಮಿಲಿಯನ್ ಲಸಿಕೆಯನ್ನು ಹಿಂಪಡೆಯಿರಿ ಎಂದು ಹೇಳಿದೆ. ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ತಯಾರಿಸುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಒಂದು ಮಿಲಿಯನ್ ಕೊರೊನಾ ಲಸಿಕೆಯನ್ನು ಭಾರತದಿಂದ ದಕ್ಷಿಣ ಆಫ್ರಿಕಾಗೆ ಕಳುಹಿಸಲಾಗಿತ್ತು. ಮುಂದಿನ ವಾರಗಳಲ್ಲಿ ಮತ್ತೆ 5 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಡುವುದಾಗಿ ಹೇಳಲಾಗಿತ್ತು.

ಅಸ್ಟ್ರಾಜೆನೆಕಾ ಲಸಿಕೆಯನ್ನು ಮಾರಾಟ ಮಾಡಬಹುದು ಎಂದು ಸರ್ಕಾರ ಹೇಳಿತ್ತು, ಆದರೆ ಒಂದು ಸಣ್ಣ ಕ್ಲಿನಿಕಲ್ ಪ್ರಯೋಗದ ನಂತರ ಲಸಿಕೆಯನ್ನು ತಡೆಹಿಡಿಯಲಾಗಿದೆ.

Leave A Reply

Your email address will not be published.