Ultimate magazine theme for WordPress.

‘ಹಮ್ ಮೋದಿ ಕೋ ಮಾರೆಂಗೆ’ ಎಂದ ಆರು ವರ್ಷದ ಮಗು

0

ನವದೆಹಲಿ, ಮೇ 16: ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ, ಅಲ್ಲಿದ್ದ ಮಗುವೊಂದು ‘ಮೋದಿ ನಾವು ನಿಮ್ಮನ್ನು ಕೊಲ್ಲುತ್ತೇವೆ’ (ಹಮ್ ಮೋದಿ ಕೋ ಮಾರೆಂಗೆ) ಎಂದು ಹೇಳಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಬಿಜೆಪಿ ಐಟಿ ಸೆಲ್‌ ನ ಮಖ್ಯಸ್ಥ ಅಮಿತ್ ಮಾಳವೀಯಾ ಶನಿವಾರ ಟ್ವೀಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡು ಬಂದಿದ್ದವರೊಬ್ಬರನ್ನು ಆಸ್ಪತ್ರೆಯಲ್ಲಿ ಬಿಳ್ಕೊಡಲಾಗುತ್ತಿತ್ತು. ಈ ವೇಳೆ ಆರು ವರ್ಷದ ಮಗುವೊಂದು ‘ಹಮ್ ಮೋದಿ ಕೋ ಮಾರೆಂಗೆ’ ಎಂದಿರುವುದು ವಿಡಿಯೋದಲ್ಲಿ ಕೇಳುತ್ತದೆ.

ಈ ಘಟನೆ ಮಧ್ಯಪ್ರದೇಶದ ಇಂದೋರ್ ನ ಇಂಡೆಕ್ಸ್ ಮಡಿಕಲ್ ಕಾಲೇಜಿನಲ್ಲಿ ನಡೆದಿದ್ದು ಎಂದು ಮಾಳವೀಯಾ ಹೇಳಿದ್ದಾರೆ. ಮಗುವಿನ ಮನಸ್ಸಲ್ಲಿ ವಿಷ ತುಂಬಿದವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

Leave A Reply

Your email address will not be published.