Ultimate magazine theme for WordPress.

ಸ್ಟೀವ್ ವಾಗೆ ಬೆದರಿಕೆ ಹಾಕಿದ್ದ ಅಂಬ್ರೋಸ್: 25 ವರ್ಷಗಳ ನಂತರ ಕಾರಣ ಬಹಿರಂಗ

0

ವೆಸ್ಟ್ ಇಂಡೀಸ್‌ ಕ್ರಿಕೆಟ್‌ನ ದಿಗ್ಗಜ ಬೌಲರ್ ಕಾರ್ಟ್ಲೀ ಅಂಬ್ರೋಸ್ ಮೈದಾನದಲ್ಲಿ ತಮ್ಮ ನಿಖರ ಬೌಲಿಂಗ್ ದಾಳಿಯ ಜೊತೆಗೆ ತಮ್ಮ ಸೌಮ್ಯ ಸ್ವಭಾವದಿಂದ ಖ್ಯಾತರಾದವರು. ಆದರೆ ಇಂತಾ ಕ್ರಿಕೆಟಿಗ ಒಮ್ಮೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಜೊತೆಗೆ ವಾಗ್ವಾದವನ್ನು ನಡೆಸಿದ್ದರು. ಅದು ಎಷ್ಟರ ಮಟ್ಟಿಗೆ ಹೋಗಿತ್ತು ಅಂದರೆ ಒಂದು ಹಂತದಲ್ಲಿ ವಿಂಡೀಸ್ ನಾಯಕ ರಿಚೀ ರಿಚರ್ಡ್ಸನ್ ಮಧ್ಯೆ ಬಂದು ಬಲವಂತವಾಗಿ ಆಂಬ್ರೋಸ್ ಅವರನ್ನು ದೂರ ಕರೆದೊಯ್ದಿದ್ದರು. ಆ ಸಂದರ್ಭವನ್ನು ಆಂಬ್ರೋಸ್ ಸ್ಮರಿಸಿಕೊಂಡಿದ್ದಾರೆ. ಆ ಮಾತಿನ ಚಕಮಕಿಗೆ ಕಾರಣವಾದ ಅಂಶವನ್ನು ಅವರು ಹೇಳಿಕೊಂಡಿದ್ದಾರೆ. ಸ್ಕೈ ಸ್ಪೋರ್ಟ್ಸ್‌ನ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ವಿಂಡೀಸ್‌ನ ಮಾಜಿ ಆಟಗಾರ ಇಯಾನ್ ಬಿಶಪ್ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಅಂಬ್ರೋಸ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

“ನನ್ನ ಮತ್ತು ಸ್ಟೀವ್ ವಾ ಮಧ್ಯೆ ಯಾವಾಗಲೂ ಕಠಿಣ ಸ್ಪರ್ಧೆ ಇರುತ್ತಿತ್ತು. ಇದು ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿತ್ತು. ಆದರೆ ನಾನು ಆತನನ್ನು ಯಾವಾಗಲೂ ಗೌರವಿಸುತ್ತಿದ್ದೆ. ಆದರೆ ಆ ನಿರ್ದಿಷ್ಟ ಪಂದ್ಯದಲ್ಲಿ ಸ್ಟೀವ್ ವಾ ನನಗೆ ಇಷ್ಟವಾಗದ ಮಾತುಗಳನ್ನಾಡಿದ್ದರು ಎಂದು ಆಂಬ್ರೋಸ್ ವಿವರಿಸಿದ್ದಾರೆ. ಆರಂಭದಲ್ಲಿ ನಾನು ಅದನ್ನು ನಿರ್ಲಕ್ಷಿಸಿದ್ದೆ. ಆದರೆ ಆ ನಂತರವೂ ಮುಂದುವರಿದಾಗ ನಾನು ಪ್ರಶ್ನಿಸಿದೆ, ಆದಕ್ಕೆ ಸ್ಟೀವ್ ವಾ “ನನಗೇನು ಅನಿಸುತ್ತೋ ನಾನು ಅದನ್ನು ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದರು. ಆತನಿಂದ ಗೌರವ ದೊರೆಯದಿದ್ದಾಗ ನಾನು ಪ್ರತಿಕ್ರಿಯಿಸಿದ್ದೆ. “ಈ ಕ್ಷಣವೇ ನನ್ನ ಕ್ರಿಕೆಟ್ ವೃತ್ತಿ ಜೀವನ ಅಂತ್ಯ ಗೊಳ್ಳಬಹುದು, ಅದರಿಂದ ನನಗೆ ಹೆಚ್ಚಿನ ವ್ಯತ್ಯಾಸವಾಗಲಾರದು, ಆದರೆ ನಿನ್ನ ಕೆರಿಯರ್ ಸಂಪೂರ್ಣ ಅಂತ್ಯವಾಗುತ್ತದೆ. ನಿನಗೆ ಇನ್ನು ಯಾವತ್ತೂ ಕ್ರಿಕೆಟ್ ಆಡಲು ಸಾಧ್ಯವಾಗದಂತೆ ಹೋಡೆತವನ್ನು ನೀಡುತ್ತೇನೆ ” ಎಂದು ಹೇಳಿದ್ದನ್ನು ನೆನಪಿಸಿಕೊಂಡರು ಆಂಬ್ರೋಸ್.

Leave A Reply

Your email address will not be published.