Ultimate magazine theme for WordPress.

ಸಿನಿಮಾವೊಂದರಲ್ಲಿ ನಟಿಸಲು ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಆಫರ್​ ನೀಡಿದ ಪುರಿ ಜಗನ್ನಾಥ್​

0

ಕೊರೋನಾ ಲಾಕ್​ಡೌನ್​ ಹಿನ್ನಲೆಯಲ್ಲಿ ಆಯಾ ರಾಜ್ಯದ ಸರ್ಕಾರಗಳು ಸಿನಿಮಾ ಸಂಬಂಧಿಸಿದ ಕೆಲಸಗಳಿಗೆ ಅನುಮತಿ ನೀಡಿದೆ. ಹಾಗಾಗಿ ಕೆಲವು ನಿರ್ದೇಶಕರು ತಮ್ಮ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸವನ್ನು ಕಂಪ್ಲೀಟ್​ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವರು ಸ್ಕ್ರಿಪ್​ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ಟಾಲಿವುಡ್​​ ನಿರ್ದೇಶಕ ಪುರಿ ಜಗನ್ನಾಥ್​​​ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಆ ಸಿನಿಮಾಕ್ಕಾಗಿ ಆಸ್ಟ್ರೇಲಿಯಾ ಸ್ಟಾರ್​ ಕ್ರಿಕೆಟಿಗನಿಗೆ ಆಫರ್ ನೀಡಿದ್ದಾರಂತೆ.

ಸಾಕಷ್ಟು ಹಿಟ್​ ಸಿನಿಮಾ ನೀಡಿದ್ದ ನಿರ್ದೇಶಕ ಪುರಿ ಜಗನ್ನಾಥ್​ ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟ್ಸ್​​ಮನ್​ ಡೇವಿಡ್​ ವಾರ್ನರ್​ ಅವರಿಗೆ ನಟಿಸಲು ಆಫರ್​ ನೀಡಿದ್ದಾರೆ ಎಂಬ ಮಾತು ಟಾಲಿವುಡ್​​ನಲ್ಲಿ ಕೇಳಿಬಂದಿದೆ. ಇನ್ನು ಡೇವಿಡ್​​ ಐಪಿಎಲ್​ನಲ್ಲಿ ಸನ್​ ರೈಸರ್ಸ್​​​ ಹೈದರಾಬಾದ್​ ತಂಡದ ಪರವಾಗಿ ಆಡುತ್ತಾರೆ. ಇವರ ಸ್ಟೋಟಕ ಬ್ಯಾಟಿಂಗ್​ಗೆ ಅನೇಕರು ಫೀದಾ ಆಗಿದ್ದಾರೆ. ಸಾಕಷ್ಟು ತೆಲುಗು ಅಭಿಮಾನಿಗಳನ್ನು ಸಹ ಡೇವಿಡ್​ ಹೊಂದಿದ್ದಾರೆ.

ಸದ್ಯ ಲಾಕ್​ಡೌನ್​ನಿಂದಾಗಿ ಐಪಿಎಲ್​​ ಪಂದ್ಯ ಮುಂದಕ್ಕೆ ಹೋಗಿದೆ. ಹೀಗಾಗಿ ಡೇವಿಡ್​ ತನ್ನ ಪತ್ನಿ ಮಕ್ಕಳೊಂದಿಗೆ ತವರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಟಿಕ್​ ಟಾಕ್​ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್​​ ನಟನೆಯ ‘ಅಲಾ ವೈಕುಂಠಪುರಂಲೋ‘ ಸಿನಿಮಾದ ‘ಬುಟ್ಟ ಬೊಮ್ಮಾ‘ ಹಾಡಿಗೆ ವಾರ್ನರ್​ ಮತ್ತು ಅವರ ಕುಟುಂಬ ಟಿಕ್ ಟಾಕ್​ ಮಾಡಿದ್ದರು. ಈ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟಿಕ್​ ಟಾಕ್​​ ವಿಡಿಯೋ ನೋಡಿ ಅಲ್ಲು ಅರ್ಜುನ್​ ಕೂಡ ಟ್ವಿಟ್ಟರ್​ ಮೂಲಕ ವಾರ್ನರ್​ಗೆ ಧನ್ಯವಾದ ತಿಳಿಸಿದ್ದರು.

Leave A Reply

Your email address will not be published.