Ultimate magazine theme for WordPress.

ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಕಠಿಣ ಕ್ರಮಕ್ಕೆ ನಿತೀಶ್ ಆದೇಶ

0

ಪಟ್ನಾ, ಜನವರಿ 22: ರಾಜ್ಯ ಸರ್ಕಾರ, ಅದರ ಸಚಿವರು ಮತ್ತು ಇತರೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಅವಹೇಳನಾಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಬಿಹಾರ ಸರ್ಕಾರ ಮುಂದಾಗಿದೆ.

ಇಂತಹ ಪೋಸ್ಟ್‌ಗಳನ್ನು ಸೈಬರ್ ಕ್ರೈಮ್ ವಿಭಾಗದಡಿ ತರಲು ನಿರ್ಧರಿಸಿದ್ದು, ಅಂತರ್ಜಾಲ ಮಾಧ್ಯಮಗಳಲ್ಲಿನ ಟೀಕೆಗಳ ವಿರುದ್ಧ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿರುವ ಸೂಚನೆ ದೊರೆತಿದೆ. ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕೀಳು ಮಟ್ಟದ ಟೀಕೆಗಳನ್ನು ಮಾಡಿದವರ ವರದಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳುವಂತೆ ಅವರು ರಾಜ್ಯ ಪೊಲೀಸರ ಆರ್ಥಿಕ ಅಪರಾಧ ಘಟಕಕ್ಕೆ ಆದೇಶಿಸಿದ್ದಾರೆ.

ಈಗಾಗಲೇ ಅನೇಕ ರಾಜ್ಯಗಳಲ್ಲಿ ಅಂತರ್ಜಾಲದಲ್ಲಿನ ಅಪರಾಧಿ ಚಟುವಟಿಕೆಗಳು ಮತ್ತು ಹೇಳಿಕೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಗೆ ಬಂದಿದೆ. ಬಿಹಾರದಲ್ಲಿ ಈ ಬಗ್ಗೆ ಅಷ್ಟು ಗಂಭೀರವಾದ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಗುರುವಾರ ಆರ್ಥಿಕ ಅಪರಾಧ ದಳದ ಮುಖ್ಯಸ್ಥ ಐಜಿ ನಯ್ಯರ್ ಹಸ್ನೈನ್ ಖಾನ್ ಅವರು ರಾಜ್ಯ ಸರ್ಕಾರದ ಎಲ್ಲ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದಾರೆ.

Leave A Reply

Your email address will not be published.