ನವದೆಹಲಿ, ಮೇ 24: ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭಗೊಳ್ಳಲಿದೆ. ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. ಆದರೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹಲವು ರಾಜ್ಯಗಳು ಸಧ್ಯಕ್ಕೆ ದೇಶೀಯ ವಿಮಾನಗಳ ಹಾರಾಟ ಬೇಡ ಎಂದು ಹೇಳುತ್ತಿವೆ.
ದೇಶೀಯ ವಿಮಾನಗಳ ಸೇವೆ ಆರಂಭವಾಗುತ್ತಿದೆ ಎನ್ನುವಾಗಲೇ ತಮಿಳುನಾಡು ಸರ್ಕಾರ ಮೇ 31ರವರೆಗೆ ನಮ್ಮ ರಾಜ್ಯಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿತ್ತು.
ಇದೀಗ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಕೂಡ ಇದಕ್ಕೆ ದನಿಗೂಡಿಸಿವೆ.ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಇನ್ನು ದೇಶೀಯ ವಿಮಾನಗಳ ಸೇವೆ ಆರಂಭವಾದರೆ ಬೇರೆ ಬೇರೆ ರಾಜ್ಯಗಳಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತದೆ. ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿವೆ. ಹಾಗಾಗಿ ಈಗಾಗಲೇ ಬುಕಿಂಗ್ ಆರಂಭವಾಗಿರುವ ಕಾರಣ ಟಿಕೆಟ್ ರದ್ದುಗೊಳಿಸಿ ಹಣ ವಾಪಸ್ ನೀಡಬಹುದು ಎನ್ನುವ ಮಾತುಗಳು ಕೇಳಿಬಂದಿವೆ.
ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿವೆ. ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿತ್ತು.ಕೊಲ್ಕತ್ತ ಹಾಗೂ ಬಗ್ದೋಗ್ರಾ ವಿಮಾನ ನಿಲ್ದಾಣವು ಸಹಜ ಸ್ಥಿತಿಗೆ ಮರಳಲು ಕೆಲ ಸಮಯ ಬೇಕಾಗಿದೆ ಎಂದು ಹೇಳಿದೆ.