Ultimate magazine theme for WordPress.

ಸಂಸದೆ ಸುಮಲತಾ ಭೇಟಿ ಮಾಡಿದ ಗುರುದೇಶಪಾಂಡೆ: ಶೀಘ್ರದಲ್ಲೇ ಸರ್ಪ್ರೈಸ್!

0

ಮಂಡ್ಯ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಅವರನ್ನು ನಿರ್ದೇಶಕ ಗುರುದೇಶ ಪಾಂಡೆ ಭೇಟಿ ಮಾಡಿದ್ದಾರೆ. ಈ ಫೋಟೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಿರ್ದೇಶಕ ”ಸದ್ಯದಲ್ಲೇ ವಿಶೇಷವಾದ ಸುದ್ದಿ ಬರಲಿದೆ” ಎಂದು ತಿಳಿಸಿದ್ದಾರೆ.

ಗುರು ದೇಶಪಾಂಡೆ ಸಂಸದೆ ಸುಮಲತಾ ಅವರನ್ನು ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದ್ದು, ಅಧಿಕೃತವಾಗಿ ಹೊರಬೀಳಬೇಕಿದೆ.

ಈ ಕಡೆ ಜಂಟಲ್ ಮ್ಯಾನ್ ಸಿನಿಮಾ ನಿರ್ಮಾಣದ ನಂತರ ಗುರುದೇಶಪಾಂಡೆ ಮತ್ತೊಂದು ಚಿತ್ರವನ್ನು ಆರಂಭಿಸಲು ಸಜ್ಜಾಗಿದೆ. ನಟ ಅಜಯ್ ರಾವ್ ನಟಿಸಲಿರುವ ಚಿತ್ರಕ್ಕೆ ಗುರುದೇಶಪಾಂಡೆ ಬಂಡವಾಳ ಹಾಕಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.