ಶಿವಮೊಗ್ಗ, ಜನವರಿ 22: “ಈ ಪ್ರದೇಶದಲ್ಲಿ ಸುಮಾರು 40-50 ಕ್ರಷರ್ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಜಿಲ್ಲಾಡಳಿತದಿಂದ ಅವರು ಲೈಸೆನ್ಸ್ ಪಡೆದಿದ್ದಾರೆ. ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಶುಕ್ರವಾರ ಬೆಳಗ್ಗೆ ಬಿ. ವೈ. ರಾಘವೇಂದ್ರ ಶಿವಮೊಗ್ಗ ಸಮೀಪದ ಕಲ್ಲು ಕ್ರಷರ್ನಲ್ಲಿ ಭಾರೀ ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದರು. “ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸುತ್ತಿದೆ” ಎಂದರು.
“ಭಾರೀ ಶಬ್ದದ ಜೊತೆ ಹುಣಸೋಡು ಗ್ರಾಮದಲ್ಲಿ ಕಂಪನ ದಾಖಲಾಗಿದೆ. ಡೈನಾಮೆಟ್ ಅಥವ ಸ್ಫೋಟಕಗಳಿಂದಾಗಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಸಂಸದ ರಾಘವೇಂದ್ರ ಹೇಳಿದರು.