Ultimate magazine theme for WordPress.

ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರವಾಗಿದೆ: ಟಿಟಿವಿ ದಿನಕರನ್

0

ಬೆಂಗಳೂರು,ಜನವರಿ 22: ಕೊರೊನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಅವರ ಸಂಬಂಧಿ ಟಿಟಿವಿ ದಿನಕರನ್ ಮಾಹಿತಿ ನೀಡಿದ್ದಾರೆ.

63 ವರ್ಷದ ಶಶಿಕಲಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತರಾಗಿದ್ದರು. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

2019ರಲ್ಲಿ ಆದಾಯ ತೆರಿಗೆ ಇಲಾಖೆ ಮಾಜಿ ಎಐಎಡಿಎಂಕೆ ನಾಯಕಿ ಕೂಡ ಆಗಿರುವ ಶಶಿಕಲಾ ಅವರಿಗೆ ಸೇರಿದ 1,600 ಕೋಟಿ ರೂ.ಗಳ ಆಸ್ತಿಯನ್ನು ಬೆನಾಮಿ ವಹಿವಾಟು (ನಿಷೇಧ) ಕಾಯ್ದೆ ಪ್ರಕರಣದಲ್ಲಿ ಲಗತ್ತಿಸಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಶಿಕ್ಷೆ ಕೂಡ ಆಗಿತ್ತು. ಅಂತೆಯೇ ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಕೂಡ ವ್ಯಾಪಕ ಚರ್ಚೆಗೀಡಾಗಿತ್ತು.

Leave A Reply

Your email address will not be published.