ಬೀಜಿಂಗ್,ಫೆಬ್ರವರಿ 19: ವಿಶ್ವಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾದ ಕೊರೊನಾ ಸೋಂಕು ಹುಟ್ಟಿದ್ದು, ಬಾವುಲಿಯಿಂದಲ್ಲ ಮೊಲದಿಂದ ಎಂದು ಅಧ್ಯಯನ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ನೀಡಿರುವ ವರದಿಯಲ್ಲಿ ಈ ಕುರಿತು ವಿವರಿಸಲಾಗಿದೆ. ಮೊಲದಿಂದ ಮನುಷ್ಯನಿಗೆ ಸೋಂಕು ಹರಡಿದೆ ಎಂದು ಹೇಳಲಾಗಿದೆ.
ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೊರೊನಾ ವೈರಸ್ ನ ಮೂಲ ತಿಳಿಯಲು ಮೊದಲು ಸೋಂಕು ಪತ್ತೆಯಾದ ಚೀನಾದ ವುಹಾನ್ ಗೆ ತೆರಳಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ನೀಡಿರುವ ಮಾಹಿತಿ ಮೇರೆಗೆ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎನ್ನುವುದು ತಿಳಿದುಬಂದಿದೆ.
ಕಳೆದ ವಾರ ಕೋವಿಡ್ ಸೋಂಕಿನ ಮೂಲ ಶೋಧಕ್ಕಾಗಿ ಚೀನಾಗೆ ಆಗಮಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ತಂಡ ತನ್ನ ನಾಲ್ಕು ವಾರಗಳ ಅಧ್ಯಯನವನ್ನು ಪೂರ್ಣಗೊಳಿಸಿತ್ತು. ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ತಂಡ ವುಹಾನ್ ವೈರಸ್ ಲ್ಯಾಬ್ ನಿಂದ್ ವೈರಸ್ ಸೋರಿಕೆಯಾಗಿಲ್ಲ. ಬದಲಿಗೆ ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿ ಸೋಂಕು ಪ್ರಸರಣವಾದ ಕುರಿತು ಶಂಕೆ ಇದೆ. ಮಾರ್ಕೆಟ್ ಗೆ ತರಲಾಗಿದ್ದ ಬಾವಲಿಗಳಿಂದ ಸೋಂಕು ಪ್ರಸರಣವಾಗಿದೆ. ಬಾವಲಿಗಳಲ್ಲಿದ್ದ ವೈರಸ್ ಮತ್ತೊಂದು ಮಾಧ್ಯಮದ ಮೂಲಕ ಮಾನವರಿಗೆ ಹಬ್ಬಿದೆ ಎಂದು ಹೇಳಿತ್ತು.