Ultimate magazine theme for WordPress.

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂತು 24 ವಿಮಾನ

0

ಬೆಂಗಳೂರು, ಮೇ 30 : ವಂದೇ ಭಾರತ್ ಮಿಷನ್ ಅಡಿ 24ನೇ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದಿದೆ. ದೇಶಿಯ ವಿಮಾನ ಸೇವೆ ಆರಂಭವಾಗಿದ್ದರೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಇದುವರೆಗೂ ಆರಂಭವಾಗಿಲ್ಲ.

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಶನಿವಾರ ಮಧ್ಯಾಹ್ನ 1.15ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಆಗಮಿಸಿತು. 248 ಮಂದಿ ಅನಿವಾಸಿ ಭಾರತೀಯರು ಈ ವಿಮಾನದಲ್ಲಿದ್ದರು.

ಮಾರ್ಚ್ 22ರ ಬಳಿಕ ಅಂತರರಾಷ್ಟ್ರೀಯ ವಿಮಾನ ಹಾರಾಟ ಸಂಪೂರ್ಣವಾಗಿ ರದ್ದುಗೊಂಡಿದೆ. ವಂದೇ ಭಾರತ್ ಮಿಷನ್ ಅಡಿ ಆಗಮಿಸುವ ವಿಮಾನ ಮತ್ತು ಬೇರೆ ದೇಶಗಳ ವಿಶೇಷ ವಿಮಾನಗಳು ಮಾತ್ರ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿವೆ.

ಶನಿವಾರ ಫ್ರಾಂಕ್‌ಫರ್ಟ್‌ನಿಂದ 248 ಪ್ರಯಾಣಿಕರು, ಮುಂಜಾನೆ 3.15ಕ್ಕೆ ವಾಷಿಂಗ್ಟನ್‌ ಆಗಮಿಸಿದ ವಿಮಾನದಲ್ಲಿ 105 ಕನ್ನಡಿಗರು ಬೆಂಗಳೂರು ನಗರಕ್ಕೆ ಬಂದರು. ಎಲ್ಲರ ಆರೋಗ್ಯ ಪರೀಕ್ಷೆಯನ್ನು ನಡೆಸಿ ಕ್ವಾರಂಟೈನ್‌ಗಾಗಿ ಕಳುಹಿಸಲಾಗಿದೆ. ಯಾವುದೇ ಪ್ರಯಾಣಿಕರಲ್ಲಿ ಕೋವಿಡ್ – 19 ಸೋಂಕಿನ ಲಕ್ಷಣ ಕಂಡುಬಂದಿಲ್ಲ.

Leave A Reply

Your email address will not be published.