Ultimate magazine theme for WordPress.

ಲಾಕ್ ಡೌನ್ ಯಶಸ್ವಿ: ರಾಮನಗರದ ರೇಷ್ಮೆ ಮಾರುಕಟ್ಟೆ ಸ್ಥಗಿತ

0

ರಾಮನಗರ, ಮೇ 24: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಎಂ.ಎಸ್ ಆರ್ಚನಾ ಅದೇಶ ಹೊರಡಿಸಿದ್ದರು.
ಏಷ್ಯಾದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯಾದ ರಾಮನಗರ ರೇಷ್ಮೆ ಮಾರುಕಟ್ಟೆ ಅಡಳಿತ ಮಂಡಳಿ, ರೈತರು ಮತ್ತು ರೀಲರ್ಸ್ ಮಾಹಿತಿ ನೀಡಿ ವಹಿವಾಟು ಸ್ಥಗಿತಗೊಳಿಸಿ ಸಂಡೇ ಲಾಕ್ ಡೌನ್ ಗೆ ಬೆಂಬಲ ಘೋಷಿಸಿತು.

ಇನ್ನು ಎಪಿಎಂಸಿ ಮಾರುಕಟ್ಟೆ ಕೂಡ ವಹಿವಾಟು ಸ್ಥಗಿತಗೊಳಿಸಿತ್ತು. ಹೋಟೆಲ್, ಅಂಗಡಿ-ಮುಂಗಟ್ಟು, ಬೀದಿ ಬದಿ ವ್ಯಾಪಾರ ಕ್ಲೋಸ್‌ ಮಾಡಲಾಗಿತ್ತು. ಜಿಲ್ಲೆಯಾದ್ಯಂತ ಮದ್ಯದಂಗಡಿ ಬಂದ್‌ ಮಾಡಲಾಗಿದ್ದು, ಕೇವಲ ಪೇಪರ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಭಾನುವಾರದ ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್, ಖಾಸಗಿ ವಾಹನ ಓಡಾಟ ಸಂಪೂರ್ಣ ಬಂದ್‌ ಆಗಿತ್ತು, ವೈದ್ಯಕೀಯ ಹಾಗೂ ತರಕಾರಿ ವಸ್ತುಗಳನ್ನು ಕೊಳ್ಳಲು ಜನರು ಮುಗಿಬಿದ್ದರು.

ಕೊರೊನಾ ವೈರಸ್ ಭೀತಿಯ ನಡುವೆಯೂ ಮಾಂಸ ಮಾರಾಟದ ವ್ಯಾಪಾರ ಜೋರಾಗಿತ್ತು. ನಗರದ ಹಲವೆಡೆ ಮಾಂಸದ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಿದರು.

ಸ್ವತಃ ‌ಅಂಗಡಿ ಮಾಲೀಕರು ಗ್ರಾಹಕರ ಬಳಿ‌ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದರು, ಇನ್ನೂ ಹಲವು ಅಂಗಡಿಗಳು ಚಿಕನ್ ಖಾಲಿಯಾಗಿದೆ ಎಂದು ಬೋರ್ಡ್ ಹಾಕಿ ಬಾಗಿಲು ಬಂದ್ ಮಾಡಿದ್ದವು.

Leave A Reply

Your email address will not be published.