Ultimate magazine theme for WordPress.

ಲಾಕ್​ಡೌನ್​ ಅವಧಿಯಲ್ಲಿ 2ನೇ ವಿವಾಹವಾದ ತೆಲುಗು ನಿರ್ಮಾಪಕ ದಿಲ್​ ರಾಜು!

0

ಲಾಕ್​ಡೌನ್​ ಅವಧಿಯಲ್ಲಿ ಟಾಲಿವುಡ್​​ನ ಯಶಸ್ವಿ ನಿರ್ಮಾಪಕ ದಿಲ್​ ರಾಜು​​ 2ನೇ ಮದುವೆಯಾಗಿದ್ದಾರೆ. ಗೆಳತಿ ತೇಜಸ್ವಿಯವರನ್ನು ದಿಲ್​​ ರಾಜು​ ವರಿಸಿದ್ದಾರೆ. ನಿಜಾಮಾಬಾದ್​​ ದೇವಸ್ಥಾನದಲ್ಲಿ ಈ ಜೋಡಿ ಸರಳವಾಗಿ ವಿವಾಹವಾಗಿದ್ದು, ಆನಂತರ ದಿಲ್​ ರಾಜು ತನ್ನ ವೆಂಕಟೇಶ್ವರ ಕ್ರಿಯೇಶನ್ ಟ್ವಿಟ್ಟರ್​ ಪೇಜ್​ನಲ್ಲಿ ನಲ್ಲಿ ವಿವಾಹವಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ದಿಲ್​ ರಾಜು ಅವರ ಪತ್ನಿ ಅನಿತಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು. ಆ ಬಳಿಕ ಒಬ್ಬಳೇ ಮಗಳಿಗೆ ವಿವಾಹ ಮಾಡಿಕೊಟ್ಟರು. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನಂತರ ದಿಲ್​ ರಾಜು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇದೀಗ ತೇಜಸ್ವಿ ಎಂಬವರ ಜೊತೆಗೆ ದಿಲ್​ ರಾಜು ಎರಡನೇ ವಿವಾಹವಾಗಿದ್ದಾರೆ.

ಟಾಲಿವುಡ್​ನಲ್ಲಿ ಸಕ್ಸಸ್​ಫುಲ್​​​ ನಿರ್ಮಾಪಕ ಎಂದು ಹೆಸರು ಮಾಡಿದ್ದ ದಿಲ್​ ರಾಜು ತಮ್ಮ ಶ್ರೀ ವೆಂಕಟೇಶ್ವರ ಕ್ರಿಯೇಷನ್​​ ಮೂಲಕ ಅನೇಕ ಯಶಸ್ವಿ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಮಾತ್ರವಲ್ಲದೆ ಸಿನಿಮಾವೊಂದಕ್ಕೆ‘ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Leave A Reply

Your email address will not be published.