Ultimate magazine theme for WordPress.

ರೈತರ ಕಷ್ಟಕ್ಕೆ ಸ್ಪಂದಿಸಿದ ನಿವೃತ್ತ ಅಧಿಕಾರಿ; ಗ್ರಾಹಕರಿಗೆ ಸಿಕ್ಕಿತು ತಾಜಾ ಹಣ್ಣು

0

ದಾವಣಗೆರೆ, ಜೂನ್ 02 : ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಉದ್ಯೋಗಿ. ನಿವೃತ್ತಿಯ ಸಮಯದಲ್ಲಿಯೂ ರೈತರಿಗೆ ಸಹಾಯಕವಾಗುವ ಕಾರ್ಯಕ್ರಮ ರೂಪಿಸಿದ್ದಾರೆ. ರೈತರ ಜೊತೆ ಸಭೆ ನಡೆಸಿ ‘ರೈತರಿಂದ ನೇರವಾಗಿ ಗ್ರಾಹಕ’ ಎನ್ನುವ ವೇದಿಕೆ ಸಿದ್ಧಪಡಿಸಿ, ರೈತರಿಗೆ ನೆರವಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ‘ರೈತರಿಂದ ಗ್ರಾಹಕರಿಗೆ ನೇರ ಮಾರಾಟ’ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದವರು ಡಾ. ಟಿ. ಹೆಚ್. ಗೌಡ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕರು.

ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ರೈತರ ಸಭೆ ಸೇರಿಸಿ ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿಸಿದ್ದಾರೆ. ನೇರ ಮಾರಾಟ ವ್ಯವಸ್ಥೆಯಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಲಾಭ ಗಳಿಸಬದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

Leave A Reply

Your email address will not be published.