ಬೆಂಗಳೂರು, ಜೂನ್ 4: ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ರೋಚಕ ಬೆಳವಣಿಗೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಪೈಕಿ ಬಿಜೆಪಿ ಎರಡು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ತಲಾ ಒಂದೊಂದು ಸ್ಥಾನ ಖಚಿತ ಎನ್ನಲಾಗಿದೆ. ಈ ಕಡೆ ಬಿಜೆಪಿಯಲ್ಲಿ ರಾಜ್ಯಸಭೆ ಟಿಕೆಟ್ಗೆ ಭಾರಿ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಜೆಡಿಎಸ್ ಬಿಟ್ಟು ಬಿಜೆಪಿ ಪಕ್ಷ ಸೇರಿ ವಿಧಾನಸಭೆ ಉಪಚುನಾವಣೆಯಲ್ಲಿ ಸೋಲು ಕಂಡಿದ್ದ ಹುಣುಸೂರ್ ಮಾಜಿ ಶಾಸಕ ಎಚ್ ವಿಶ್ವನಾಥ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಿದ್ದಾರೆ ಎಂಬ ಚರ್ಚೆಯಾಗ್ತಿದೆ.
ಈಗಾಗಲೇ ಪ್ರಭಾಕರ್ ಕೊರೆ, ರಮೇಶ್ ಕತ್ತಿ ಸೇರಿದಂತೆ ಹಲವರು ಹೆಸರು ರಾಜ್ಯಸಭೆ ಚುನಾವಣೆಗೆ ಮುಂಚೂಣಿಯಲ್ಲಿದೆ. ಈ ಬಗ್ಗೆ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ…
ರಾಜ್ಯಸಭೆಗೆ ಬೇರೆ ಜನ ಇದ್ದಾರೆ. ಬಹಳಷ್ಟು ಜನ ಪ್ರಯತ್ನ ಮಾಡ್ತಿದ್ದಾರೆ. ಪ್ರಭಾಕರ ಕೋರೆಯವರು ಇದ್ದಾರೆ, ರಮೇಶ್ ಕತ್ತಿ ಪ್ರಯತ್ನ ಮಾಡ್ತಿದ್ದಾರೆ. ನನ್ನ ಗಮನ ಏನಿದ್ದರೂ ರಾಜ್ಯ ರಾಜಕಾರಣ, ವಿಧಾನ ಪರಿಷತ್” ಎಂದು ಎಚ್ ವಿಶ್ವನಾಥ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.