ಬೆಂಗಳೂರು, ಮೇ.28: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎರಡೂವರೆ ಸಾವಿರಕ್ಕೆ ಸನ್ನಿಹಿತವಾಗಿದೆ. ಗುರುವಾರ ಬೆಳಗ್ಗಿನ ಬುಲೆಟಿನ್ ನಲ್ಲಿ 75 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ಇದುವರೆಗೂ 47 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.
ಕರಾವಳಿ ಉಡುಪಿಗೆ ಮಹಾರಾಷ್ಟ್ರದ ನಂಟು ಮತ್ತೊಮ್ಮೆ ಮುಳ್ಳಾಗಿದೆ. ಜಿಲ್ಲೆಯಲ್ಲಿ ಗುರುವಾರ 27 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಎಲ್ಲರಿಗೂ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ.
ಕರ್ನಾಟಕದಲ್ಲಿ ಗುರುವಾರ ಒಟ್ಟು 75 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಉಡುಪಿ – 27, ಬೆಂಗಳೂರು – 7, ಕಲಬುರಗಿ – 3, ಹಾಸನ – 13, ಚಿತ್ರದುರ್ಗ – 6, ದಕ್ಷಿಣ ಕನ್ನಡ -6, ವಿಜಯಪುರ – 2, ಚಿಕ್ಕಮಗಳೂರು – 2, ರಾಯಚೂರು – 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಗುರುವಾರದ ಬೆಳಗ್ಗಿನ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಇಂದು ಯಾದಗಿರಿ – 9, ದಾವಣಗೆರೆ – 8, ವಿಜಯಪುರ – 4, ದಕ್ಷಿಣ ಕನ್ನಡ – 3, ಬೆಳಗಾವಿ – 2, ಬಾಗಲಕೋಟೆ – 1, ಮೈಸೂರು – 1 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.