ದಿಢೀರ್ ಸೇನಾ ಕ್ರಾಂತಿಯಿಂದ ಕಕ್ಕಾಬಿಕ್ಕಿಯಾಗಿರುವ ಮ್ಯಾನ್ಮಾರ್ ಪ್ರಜೆಗಳು ಬೀದಿಗಿಳಿದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದ್ಕಡೆ ಸಹನೆಯ ಕಟ್ಟೆ ಒಡೆದು, ಸೇನಾಧಿಕಾರಿಗಳ ವಿರುದ್ಧ ಪ್ರತಿಕಾರದ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಹೊತ್ತಲ್ಲೇ ಮ್ಯಾನ್ಮಾರ್ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಚೀನಾ ವಿರುದ್ಧ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ.
ಸೇನಾ ದಂಗೆ ಏಳಲು ಚೀನಾದ ಬೆಂಬಲ ಕಾರಣ, ಮ್ಯಾನ್ಮಾರ್ನ ಸೇನಾಧಿಕಾರಿಗಳ ಮೂಲಕ ಚೀನಾ ಕೆಲಸ ಸಾಧಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬ್ಯಾನರ್, ಪೋಸ್ಟರ್ ಹಿಡಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈಗಾಗಲೇ ಸೇನೆ ಮ್ಯಾನ್ಮಾರ್ನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ.
ಹೀಗಾಗಿ ಎಲ್ಲೆಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೋರಾಟಗಳನ್ನು ಹತ್ತಿಕ್ಕಲು ಮ್ಯಾನ್ಮಾರ್ ಸೇನಾಧಿಕಾರಿಗಳು ಬೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ನಡುವೆ ಚೀನಾ ವಿರುದ್ಧವೇ ಅಸಮಾಧಾನ ಸ್ಫೋಟಗೊಂಡಿದ್ದು, ಮ್ಯಾನ್ಮಾರ್ನ ಮತ್ತಷ್ಟು ಪ್ರದೇಶಗಳಿಗೆ ಪ್ರತಿಭಟನೆಯ ಕಿಚ್ಚು ಹಬ್ಬುವ ಆತಂಕ ಎದುರಾಗಿದೆ. ಆದರೆ ಚೀನಾ ಕೈವಾಡ ಇದೆ ಎಂಬ ಆರೋಪವನ್ನು ತಜ್ಞರು ಒಪ್ಪುತ್ತಿಲ್ಲ. ಹಾಗಾದರೆ ಈ ವಿಚಾರದಲ್ಲಿ ತಜ್ಞರು ಹೇಳುತ್ತಿರುವುದು ಏನು..? ಮುಂದೆ ತಿಳಿಯೋಣ.