Ultimate magazine theme for WordPress.

ಮೋದಿ ಜೊತೆಗಿನ ಸಭೆಯಲ್ಲಿ ಕೋವಿಡ್ ಪ್ಯಾಕೇಜ್, GST ಬಾಕಿ, ನೆರೆ-ಬರ ಪರಿಹಾರದ ಹಣ ಕೇಳಬೇಕು; ಕುಮಾರಸ್ವಾಮಿ ತಾಕೀತು

0

ಬೆಂಗಳೂರು (ಮೇ 11); ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಕೋವಿಡ್‌ ಪ್ಯಾಕೇಜ್, ಜಿಎಸ್‌ಟಿ ಬಾಕಿ ಮತ್ತು ನೆರೆ-ಬರ ಪರಿಹಾರವನ್ನು ಕೇಳಿ ಪಡೆಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯದ ಹಂತದಲ್ಲಿದ್ದು, ಈ ಕುರಿತು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಬಿಎಸ್‌ವೈ ಸಹ ಪಾಲ್ಗೊಳ್ಳಲಿದ್ದಾರೆ.

ಹೀಗಾಗಿ ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿರುವ ಕುಮಾರಸ್ವಾಮಿ, ” ಕೋವಿಡ್ ಪ್ಯಾಕೇಜ್’ ಜೊತೆಗೆ GST ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಬಿಎಸ್‌ ಯಡಿಯೂರಪ್ಪ ಮೋದಿ ಜೊತೆಗಿನ ಸಭೆಯಲ್ಲಿ ಕೇಳಬೇಕು. ಲಾಕ್ ಡೌನ್ ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಹೊತ್ತಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್ ನಿಯಂತ್ರಣ ಕಷ್ಟವಾಗಲಿದೆ.

Leave A Reply

Your email address will not be published.