ದೆಹಲಿ, ಮೇ 29: ಈ ವಾರಾಂತ್ಯಕ್ಕೆ ದೇಶದಲ್ಲಿ ಲಾಕ್ಡೌನ್ 4.0 ಅಂತ್ಯವಾಗಲಿದೆ. ಸೋಮವಾರದಿಂದ ಲಾಕ್ಡೌನ್ 5.0 ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು, ಹಲವು ಪ್ರಮುಖ ಅಂಶಗಳನ್ನು ಚರ್ಚಿಸಲಿದ್ದಾರೆ.
ಗುರವಾರವಷ್ಟೇ ಗೋವಾ ಮುಖ್ಯಮಂತ್ರಿ ಸೇರಿದಂತೆ ಕೆಲವು ರಾಜ್ಯಗಳ ಸಿಎಂಗಳನ್ನು ಅಮಿತ್ ಶಾ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇದಾದ ಒಂದು ದಿನ ಬಳಿಕ ಮೋದಿ ಅವರ ಜೊತೆ ಸಭೆ ನಡೆಸಲಿದ್ದಾರೆ.
ರಾಜ್ಯದ ಸಿಎಂಗಳು ಅಮಿತ್ ಶಾ ಅವರೊಂದಿಗೆ ಹೇಳಿರುವ ಅಂಶಗಳನ್ನು, ಪ್ರಧಾನಿ ಬಳಿ ವರದಿ ನೀಡಲಿದ್ದು, ಜೂನ್ 1ರ ನಂತರ ಏನು ಎಂಬುದನ್ನು ನಿರ್ಧರಿಸಲಿದ್ದಾರೆ. ಮುಂದೆ ಓದಿ.
ಜೂನ್ 1ರ ನಂತರ ಇನ್ನೂ ಹದಿನೈದು ದಿನಗಳ ಕಾಲ ದೇಶದಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು. ಅಮಿತ್ ಶಾ ಭೇಟಿ ವೇಳೆಯೂ ಇದೇ ಅಂಶವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಾರದೆ ಹಿನ್ನೆಲೆ, ಲಾಕ್ಡೌನ್ ಮುಂದುವರಿಸುವುದು ಅಗತ್ಯ ಎಂಬ ಅಭಿಪ್ರಾಯವೂ ಮೂಡಿದೆ. ಗೋವಾ ರಾಜ್ಯ ಮಾತ್ರವಲ್ಲ, ಹಲವು ರಾಜ್ಯಗಳು ಲಾಕ್ಡೌನ್ ಮುಂದುವರಿಸುವ ಇಂಗಿತ ಹೊಂದಿದೆ.