Ultimate magazine theme for WordPress.

ಮುತ್ತಪ್ಪರೈ ಅಂತ್ಯಕ್ರಿಯೆಯಲ್ಲಿ ಗಾಳಿಯಲ್ಲಿ ಗುಂಡು; 7 ಜನರ ಬಂಧನ

0

ಬಿಡದಿ, ಮೇ 16: ಮಾಜಿ ಭೂಗತ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಅಂತ್ಯಕ್ರಿಯೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ವಿದಾಯ ಹೇಳಿದ ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ರೈ ಸೇರಿದಂತೆ ಏಳು ಜನರ ಮೇಲೆ ಎಫ್ ಐಆರ್ ದಾಖಲು ಮಾಡಿ, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಮುತ್ತಪ್ಪ ರೈ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅವರ ಸೆಕ್ಯುರಿಟಿ ಗಾರ್ಡ್ ಗಳು ತಮ್ಮ ಮಾಲೀಕನಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ವಿದಾಯ ಹೇಳಿದ್ದರು. ಆಯೋಜಕರು ಕಾನೂನು ಉಲ್ಲಂಘನೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಪರಿಗಣಿಸಿದ ಪೊಲೀಸ್ ಇಲಾಖೆ ಬಿಡದಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/20 ರಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿಸಿದೆ. ಈ ಪ್ರಕರಣದಲ್ಲಿ, ಆಯೋಜಕ ಪ್ರಕಾಶ್ ರೈ, ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ ಹಾಗೂ ಸುನಿಲ್ ಎಂಬುವರನ್ನು ದಸ್ತಗಿರಿ ಮಾಡಿ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

Leave A Reply

Your email address will not be published.