Ultimate magazine theme for WordPress.

ಮಾಸ್ಕ್​ ಕಡ್ಡಾಯಗೊಳಿಸಿದ್ದಕ್ಕೆ ವಿರೋಧ; ಮುಂಬೈ ಪೊಲೀಸರಿಗೆ ಶಸ್ತ್ರಾಸ್ತ್ರಗಳಿಂದ ಥಳಿಸಿದ ಜನರು

0

ಮುಂಬೈ (ಮೇ 15): ಮಾಸ್ಕ್​ ಹಾಕಿಕೊಳ್ಳಲೇಬೇಕು ಎಂದು ಕಡ್ಡಾಯ ನಿಯಮವನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ಗಲಾಟೆ ಮಾಡಿದ ಗುಂಪು ಪೊಲೀಸ್ ಸಬ್​ ಇನ್​ಸ್ಪೆಕ್ಟರ್​ ಮತ್ತು ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ 15 ಜನರ ಗುಂಪೊಂದು ಮಾಸ್ಕ್ ಧರಿಸುವ ವಿಚಾರಕ್ಕೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿತ್ತು. ಈ ವೇಳೆ ಆ ಗುಂಪಿನ ಜನರು ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಹಾಗೂ ಇಬ್ಬರು ಕಾನ್ಸ್​ಟೇಬಲ್​ಗಳಿಗೆ ಚೂಪಾದ ಶಸ್ತ್ರಾಸ್ತ್ರಗಳಿಂದ ತಿವಿದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೊರೋನಾ ವೈರಸ್​ ಹರಡದಂತೆ ಎಚ್ಚರ ವಹಿಸಲು ಮಾಸ್ಕ್​ಗಳನ್ನು ಧರಿಸುವಂತೆ ಪೊಲೀಸರು ಮುಂಬೈನ ಕೋಖ್ರಿ ಅಗರ್​ ಪ್ರದೇಶದ ಜನರಿಗೆ ತಾಕೀತು ಮಾಡಿದ್ದರು. ಇದರಿಂದ ಕೋಪಗೊಂಡ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

Leave A Reply

Your email address will not be published.