Ultimate magazine theme for WordPress.

ಮಹಾರಾಷ್ಟ್ರದಿಂದ ಸೈಕಲ್​ನಲ್ಲೇ ಊರಿಗೆ ಬಂದು ಕ್ವಾರಂಟೈನ್ ಆದ ಶಿವಮೊಗ್ಗದ ಯುವಕರು

0

ಶಿವಮೊಗ್ಗ(ಮೇ 14): ಒಂದು ಕಡೆ ಕೊರೋನಾ ವೈರಸ್ ಸೋಂಕಿನ ಭೀತಿ. ಇಂದೊಂದು ಕಡೆ ಲಾಕ್ ಡೌನ್​ನಿಂದಾಗಿ ಊರಿಗೆ ಬರಲು ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಈ 5 ಜನ ಯುವಕರು ದೂರದ ಮಹಾರಾಷ್ಟ್ರದ ಮುಂಬೈನಿಂದ ಸೈಕಲ್​ನಲ್ಲಿ ಹೊರಟು ಶಿವಮೊಗ್ಗ ತಲುಪಿದ್ದಾರೆ. ಇದೀಗ ಜಿಲ್ಲಾಡಳಿತ ಅವರನ್ನು ಕ್ವಾರಂಟೈನ್ ಮಾಡಿದೆ. ಸೈಕಲ್​ನಿಂದ ಬಂದಿರುವ ಐವರ ತಂಡ, ಸೊರಬ ತಾಲೂಕಿನ ಆನವಟ್ಟಿ ಬಳಿಯ ಹುಲುಗಡ್ಡೆ ಕ್ರಾಸ್ ಬಳಿಯ ಚೆಕ್​ಪೋಸ್ಟ್ ನಲ್ಲಿ ಸಿಲುಕಿಕೊಂಡು ಇದೀಗ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಜಿಲ್ಲೆಯ ಸೊರಬ, ಸಾಗರ ಹಾಗೂ ಹೊಸನಗರ ತಾಲೂಕಿನ ಐವರು ಯುವಕರು ಉದ್ಯೋಗವನ್ನು ಅರಸಿ ಮುಂಬೈ ಸೇರಿದ್ದರು. ಚಿನ್ನ-ಬೆಳ್ಳಿ ಆಭರಣ ಮಾಡುವ ವೃತ್ತಿಯನ್ನು ಆಯ್ದು ಕೊಂಡಿದ್ದ ಯುವಕರು ಕುಟುಂಬ ನಿರ್ವಹಣೆ ಹಾಗೂ ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಥಾಣೆಯಲ್ಲಿ ತಂಗಿದ್ದರು.

ಅಲ್ಲಿ ಕೊರೋನಾ ಮಹಾಮಾರಿಯ ರುದ್ರತಾಂಡವದಿಂದ ಬೆಚ್ಚಿದ ಯುವಕರು, ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ, ಸ್ವಗ್ರಾಮಕ್ಕೆ ತೆರಳುವ ಸಿದ್ಧತೆ ಕೈಗೊಂಡಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ತೆರಳಲು ಪಾಸ್ ದೊರೆತಿರಲಿಲ್ಲ. ಇದರಿಂದ ಬೇಸತ್ತ ಈ ಹುಡುಗರು, ಮುಂಬೈನ ಥಾಣೆಯಲ್ಲಿ ಐದು ಹೊಸ ಸೈಕಲ್​ಗಳನ್ನು ಖರೀದಿಸಿ, ಮೇ. 2 ರ ಶನಿವಾರ ಮುಂಜಾನೆ ಹೊರಟು ಸುಮಾರು ಒಂದು ವಾರ ಕಾಲ ಸೈಕಲ್​ನಲ್ಲಿಯೇ ಪಯಣ ನಡೆಸಿದ್ದಾರೆ.

Leave A Reply

Your email address will not be published.