Ultimate magazine theme for WordPress.

ಮದ್ಯ ಮಾರಾಟಕ್ಕೆ BevQ ಆಪ್ ಸಿದ್ದಪಡಿಸಿದ ಕೇರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ?

0

ತಿರುವನಂತಪುರಂ, ಮೇ 27: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಂತಿಮವಾಗಿ ಮೂರನೇ ಲಾಕ್‌ಡೌನ್‌ ಮುಕ್ತಾಯದ ನಂತರ ದೇಶದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಯಿತು.

ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರು ವಿಫಲರಾದರು. ಅಂಗಡಿ ಮಾಲೀಕರು ನಿಯಂತ್ರಿಸುವಲ್ಲಿ ಎಡವಿದರು. ಇದರಿಂದ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಮತ್ತೆ ಬ್ರೇಕ್ ಬಿತ್ತು. ಕೇರಳದಲ್ಲೂ ಮದ್ಯ ಮಾರಾಟ ನಿಲ್ಲಿಸಿತು.

ಇದೀಗ, ಕೇರಳದಲ್ಲಿ ಮದ್ಯ ಮಾರಾಟಕ್ಕಾಗಿ ನೂತನ ಆಪ್ ತಯಾರಿಸಲಾಗಿದೆ. ಈ ಆಪ್ ಬಳಸಿ ಮದ್ಯಪ್ರಿಯರು ಆರಾಮಾಗಿ ಮದ್ಯ ಖರೀದಿಸಬಹುದು. ಇದರಿಂದ ಸಾಮಾಜಿಕ ಅಂತರವೂ ಕಾಪಾಡಬಹುದು ಮತ್ತು ಕೊರೊನಾ ಸೋಂಕಿನಿಂದಲೂ ತಪ್ಪಿಸಿಕೊಳ್ಳಬಹುದು. ಅಂದ್ಹಾಗೆ, ಈ ಆಪ್ ಹೇಗೆ ಕಾರ್ಯನಿರ್ವಹಿಸುತ್ತೆ? ಮುಂದೆ ಓದಿ….

ಆನ್‌ ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕೇರಳ ಸರ್ಕಾರ BevQ ಎಂಬ ನೂತನ ಆಪ್ ತಯಾರಿಸಿದೆ. ಈ ಆಪ್‌ಗೆ ಗೂಗಲ್ ಅನುಮೋದನೆ ನೀಡಿದೆ. ಅತಿ ಶೀಘ್ರದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ BevQ ಆಪ್ ಲಭ್ಯವಾಗಲಿದ್ದು, ಅದನ್ನು ಬಳಸಿ ಮದ್ಯಪ್ರಿಯರು ಮದ್ಯ ಖರೀದಿಸಬಹುದು.

Leave A Reply

Your email address will not be published.