Ultimate magazine theme for WordPress.

ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ ‘ಫೇಲ್’ ಆಗದಿರಲಿ

0

ಮೂರು ತಿಂಗಳ ಹಿಂದೆ ಆಲೋಚನೆ ಕೂಡ ಮಾಡದ ಸವಾಲುಗಳನ್ನು ಕೊರೊನಾ ನಮ್ಮ ಮುಂದೆ ತಂದಿದೆ. ಒಂದೊಂದು ವಯಸ್ಸಿನ ಆಲೋಚನೆ- ಚಿಂತೆ ಒಂದೊಂದು ಬಗೆಯದು. ಉದ್ಯೋಗ, ಶಿಕ್ಷಣ, ಆರೋಗ್ಯ… ಹೀಗೆ. “ಶೈಕ್ಷಣಿಕ ಪರಿವರ್ತನೆಯತ್ತ ಶಿಕ್ಷಕರು” ಎಂಬ ಸಂಘಟನೆಯಲ್ಲಿ ಸಂಯೋಜಕರಾಗಿರುವ ಎಸ್. ಮುರಳಿ ಮೋಹನ್ ಅವರು ಶಿಕ್ಷಣದ ಮಹತ್ವದ ಸಂಗತಿಗಳನ್ನು ಪ್ರಸ್ತಾವ ಮಾಡಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರವು. -ಸಂಪಾದಕ *** “ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರಕಬೇಕಾದ ಎಲ್ಲ ಸವಲತ್ತುಗಳೂ ದೊರಕುವಂತಾಗಬೇಕು” ಎಂಬುದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಪರಿಕಲ್ಪನೆಯಲ್ಲಿ ಇರುವ ಸಂಗತಿ. ಈ ವಿಚಾರವನ್ನು ಎಲ್ಲ ಹಂತದಲ್ಲೂ ನೆನಪಿಸಿಕೊಳ್ಳಬೇಕು ಎಂಬುದು ಹಿಂದೆಂದಿಗಿಂತ ಈಗ ಅಗತ್ಯವಾಗಿದೆ.

ಈಗ ಶಿಕ್ಷಣದ ಬಗ್ಗೆ ಚಿಂತಿಸುವಾಗ ಮತ್ತು ನಾವು ಅತ್ಯಂತ ಕಡಿಮೆ ಸವಲತ್ತು ಹೊಂದಿರುವ ಪ್ರದೇಶವನ್ನು ಪರಿಗಣಿಸಿ, ಆ ಪ್ರದೇಶವನ್ನು ತಲುಪಲು ಬೇಕಾದ ವ್ಯವಸ್ಥೆಯ ಬಗ್ಗೆ ಎಲ್ಲ ಯೋಜನೆಗಳನ್ನು ರೂಪಿಸಬೇಕಾಗಿರುವುದು ಸರ್ಕಾರ/ಸಮಾಜದ ಚಿಂತನೆಯಾಗಬೇಕು. ಈ ಸಂಗತಿಯು ಕಾರ್ಪೊರೇಟರ್ ಹಂತದಿಂದ ಸಚಿವರಾಗುವ ತನಕ ಬೆಳೆದು ಬಂದಿರುವ ಸುರೇಶ್ ಕುಮಾರ್ ಅವರಿಗೆ ಸುಸ್ಪಷ್ಟವಾಗಿರುತ್ತದೆ.

ಆದರೆ, ಹೊಸ ವ್ಯವಸ್ಥೆ ಅಂದಾಗ ಮಕ್ಕಳು, ಅವರ ಪೋಷಕರು, ಶಿಕ್ಷಕರು, ಶಾಲಾ ವಾತಾವರಣ ಎಲ್ಲವೂ ಸಂಸಿದ್ಧಗೊಳ್ಳಬೇಕು ಅಲ್ಲವೇ? ಈ ಕೊರೊನಾದ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಪ್ರಯತ್ನ ನನ್ನದು. ಒಂದು ವರ್ಗ ಅಥವಾ ಒಂದು ಪ್ರದೇಶಕ್ಕೆ ಅನ್ವಯವಾಗುವ ಯಾವುದೇ ಯೋಜನೆ/ಚಿಂತನೆ ಎಂದಿಗೂ ಸರ್ವಸಮ್ಮತವಾಗಲಾರದು. ಈ ದಿಸೆಯಲ್ಲಿ ಕೊರೊನಾ ಸಂದರ್ಭದಲ್ಲಿನ ಆನ್ ಲೈನ್ ತರಗತಿಗಳು ಎಲ್ಲ ತರಗತಿಗಳಿಗೂ ಮತ್ತು ಎಲ್ಲ ಪ್ರದೇಶಗಳಿಗೂ ಅನ್ವಯವಾಗಲಾರದು.

Leave A Reply

Your email address will not be published.