Ultimate magazine theme for WordPress.

ಮಂಗಳ ಗ್ರಹಕ್ಕೂ ಲಗ್ಗೆ ಇಟ್ಟ ಚೀನಾ, ‘ಟಿಯಾನ್ವೆನ್-1’ ಯಶಸ್ವಿ ಕಾರ್ಯಾಚರಣೆ

0

ಚಂದ್ರನ ಅಂಗಳ ಮುಟ್ಟಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಸದ್ದು ಮಾಡುತ್ತಿರುವ ಚೀನಾ ಇದೀಗ ಮಂಗಳ ಗ್ರಹದ ಸಮೀಪಕ್ಕೆ ತಲುಪಿಬಿಟ್ಟಿದೆ. 2020ರಲ್ಲಿ ಚೀನಾ ಉಡಾಯಿಸಿದ್ದ ‘ಟಿಯಾನ್ವೆನ್-1’ ಯಶಸ್ವಿಯಾಗಿ ಮಂಗಳನ ಕಕ್ಷೆ ತಲುಪಿದೆ.

‘ಟಿಯಾನ್ವೆನ್-1’ ಮಂಗಳ ಗ್ರಹದ ಕಕ್ಷೆಯನ್ನು ತಲುಪಿ, ಹಲವು ಚಿತ್ರಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಿದೆ. ಈ ಬಗ್ಗೆ ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಸಿಎನ್‌ಎಸ್‌ಎ ಮಹತ್ವದ ಮಾಹಿತಿ ನೀಡಿದೆ.

ಬ್ಲ್ಯಾಕ್ & ವೈಟ್ ಫೋಟೋಗಳು ಇವಾಗಿದ್ದು, ಮಂಗಳನ ನೆಲದ ಮೇಲಿಂದ ಸುಮಾರು 22 ಲಕ್ಷ ಕಿಲೋ ಮೀಟರ್‌ ಎತ್ತರದಿಂದ ಫೋಟೋ ಕ್ಲಿಕ್ಕಿಸಲಾಗಿದೆ ಎಂದಿದೆ ‘ಸಿಎನ್‌ಎಸ್‌ಎ’. ಬಾಹ್ಯಾಕಾಶ ಕ್ಷೇತ್ರದ ಅನ್ವೇಷಣೆಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿರುವ ಸಮಯದಲ್ಲೇ ‘ಟಿಯಾನ್ವೆನ್-1’ ಉಡಾವಣೆಗಾಗಿ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಪ್ಲ್ಯಾನ್ ರೂಪಿಸಿದ್ದರು.

Leave A Reply

Your email address will not be published.