Ultimate magazine theme for WordPress.

ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹಿಡಿತದಲ್ಲಿದೆ: ಎಂಎಂ ನರವಾಣೆ

0

ನವದೆಹಲಿ, ಜೂನ್ 13: ಭಾರತ ಹಾಗೂ ಚೀನಾ ಗಡಿಯಲ್ಲಿ ಪರಿಸ್ಥಿತಿ ಹಿಡಿತದಲ್ಲಿದೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹೇಳಿದ್ದಾರೆ.
ಕಮಾಂಡರ್ ಹಂತದ ಅಧಿಕಾರಿಗಳವರೆಗೂ ಸರಣಿ ಸಭೆಗಳನ್ನು ನಡೆಸದ್ದೇವೆ. ಸ್ಥಳೀಯ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದ್ದೇವೆ ಎಂದರು. ನಾವು ನೇಪಾಳದ ಜೊತೆ ಗಟ್ಟಿ ಸಂಬಂಧವನ್ನು ಹೊಂದಿದ್ದೇವೆ.

ಸಾಂಸ್ಕೃತಿಕ, ಭೌಗೋಳಿಕ, ಧಾರ್ಮಿಕ ಸಂಬಂಧ ಹೊಂದಿದದ್ದೇವೆ. ನಮ್ಮ ಸಂಬಂಧ ಎಂದಿಗೂ ಹೀಗೆಯೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿತ್ಯ ಚೀನಾದ ಕಮಾಂಡರ್‌ಗಳ ಜೊತೆಗೂ ಮಾತುಕತೆ ನಡೆಸುತ್ತಿದ್ದೇವೆ ಎಂದರು.

ಪಾಂಗಾಂಗ್ ತ್ಸೊ ಸರೋವರದ ಬಳಿ ಭಾರತ ನಿರ್ಮಿಸುತ್ತಿರುವ ಒಂದು ಸೇತುವೆ ಹಾಗೂ ಚೀಣಾದ ಸೇನೆ ನಿರ್ಮಿಸಿರುವ ಒಂದು ಬಂಕರ್ , ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಮಾತುಕತೆಗೆ ಅಡ್ಡಿಯಾಗಿದೆ. ಎರಡೂ ಸೇನೆಗಳ ವಿಭಾಗೀಯ ಕಮಾಂಡರ್ ಮಟ್ಟದ ಇನ್ನೊಂದು ಸುತ್ತಿನ ಸಭೆ ಶುಕ್ರವಾರ ನಡೆದಿದೆ.

ಜೂನ್ 6 ರಂದು ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಬರಲಾದ ವಿಚಾರಗಳ ಅನುಷ್ಠಾನವನ್ನು ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಪಾಂಗಾಂಗ್ ತ್ಸೊ ಸರೋವರದ ದಂಡೆಯ ಫಿಂಗರ್ 4 ಪ್ರದೇಶದಲ್ಲಿ ನಿರ್ಮಿಸಿರುವ ಬಂಕರ್ ಅನ್ನು ಕೆವಲು ಚೀನಾ ನಿರಾಕರಿಸಿದ್ದರಿಂದ ಉದ್ವಿಗ್ನತೆಯನ್ನು ಪೂರ್ಣಪ್ರಮಾಣದಲ್ಲಿ ಶಮನಗೊಳಿಸಲು ಸಾಧ್ಯವಾಗಿಲ್ಲ.

Leave A Reply

Your email address will not be published.