Ultimate magazine theme for WordPress.

ಭಾರತದಲ್ಲಿ ನೆಕ್ಸ್ಟ್ ಜನರೇಷನ್ ಪೊಲೊ ಬಿಡುಗಡೆ ಇಲ್ಲವೆಂದ ಫೋಕ್ಸ್‌ವ್ಯಾಗನ್

0
ಜರ್ಮನ್ ಬ್ರಾಂಡ್ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಭಾರತದಲ್ಲಿ ನೆಕ್ಸ್ಟ್ ಜನರೇಷನ್ ಪೊಲೊ ಹ್ಯಾಚ್ ಬ್ಯಾಕ್ ಕಾರುಗಳ ಬಿಡುಗಡೆಯ ವಿಚಾರವಾಗಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಬಹುನೀರಿಕ್ಷಿತ ಕಾರಿಗಾಗಿ ಕಾಯ್ದುಕುಳಿತಿದ್ದ ಗ್ರಾಹಕರಿಗೆ ನಿರಾಸೆ ಮೂಡಿಸಿದೆ. ಅತ್ಯುತ್ತಮ ದರ್ಜೆಯ ಹ್ಯಾಚ್ ಬ್ಯಾಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಗಾಗಿ ಸುಧಾರಿತ ತಂತ್ರಜ್ಞಾನ ಪ್ಯಾಟ್ ಫಾರ್ಮ್ ಆಧಾರ ಮೇಲೆ ಹೊಸ ಕಾರುಗಳ ಉತ್ಪಾದನೆಗೆ ಮುಂದಾಗಿದ್ದು, ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸೆಡಾನ್ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಕಾರುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಬಲ್ಲ ಎಂಕ್ಯೂಬಿ ಎ0 ತಂತ್ರಜ್ಞಾನದಡಿ ಹೊಸ ಕಾರುಗಳ ಅಭಿವೃದ್ದಿಗಾಗಿ ಸ್ಕೋಡಾ ಜೊತೆಗೂಡಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಪೊಲೊ ಹ್ಯಾಚ್ ಬ್ಯಾಕ್ ಬದಲಾಗಿ ಸೆಡಾನ್ ಮತ್ತು ಕಂಪ್ಯಾಕ್ಚ್ ಎಸ್ ಯುವಿ ಕಾರುಗಳ ಉತ್ಪಾದನೆ ಮಾತ್ರ ಒತ್ತು ನೀಡುತ್ತಿದೆ. ಸದ್ಯ ಭಾರತದಲ್ಲಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳ ಅಗ್ಗದ ಬೆಲೆಯ ಹಲವಾರು ಹ್ಯಾಚ್ ಬ್ಯಾಕ್ ಕಾರುಗಳು ಖರೀದಿಗೆ ಲಭ್ಯವಿದ್ದು, ಈ ಹಿನ್ನೆಲೆ ಗುಣಮಟ್ಟದ ಪೊಲೊ ಕಾರುಗಳನ್ನು ಅಗ್ಗದ ಬೆಲೆಗಳಲ್ಲಿ ಮಾರಾಟ ಮಾಡಿ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಹೀಗಾಗಿ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ಪೊಲೊ ಹ್ಯಾಚ್ ಬ್ಯಾಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಬೇಡವೇ ಬೇಡ ಎಂದು ನಿರ್ಧರಿಸಿರುವ ಫೋಕ್ಸ್ ವ್ಯಾಗನ್, ಕಡಿಮೆ ದರಗಳಿಗೆ ಕಾರು ಮಾಡಿ ಜನಪ್ರಿಯವಾಗುವುದಕ್ಕಿಂತ ಬೆಲೆ ಜಾಸ್ತಿ ಆದರೂ ಪರವಾಗಿಲ್ಲ ಹೊಸ ಕಾರುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದೇ ಮುಖ್ಯ ಉದ್ದೇಶ ಎನ್ನಲಾಗಿದೆ. ಇದರಿಂದ ಅಗ್ಗದ ಬೆಲೆಯಲ್ಲಿ ಕಾರು ಮಾರಾಟ ಮಾಡುವ ಯೋಜನೆಗಳಿಗಳಿಗೆ ಗುಡ್ ಬೈ ಹೇಳಿರುವ ಫೋರ್ಕ್ಸ್ ವ್ಯಾಗನ್ ಸಂಸ್ಥೆಯು ಸ್ಕೋಡಾ ಜೊತೆಗೂಡಿ ಅತ್ಯುತ್ತಮ ಮಾದರಿಯ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸೆಡಾನ್ ಕಾರುಗಳನ್ನು ಅಭಿವೃದ್ಧಿಪಡಿಸುವ ಯೋಜನೆಯತ್ತ ಗಮನಹರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಕೋಡಾ ಸಿಇಒ ಬೆನ್ಹಾರ್ಡ್ ಮೈಯೆರ್, ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗಳಲ್ಲಿ ಈಗಾಗಲೇ ಹಲವಾರು ಹ್ಯಾಚ್ ಬ್ಯಾಕ್ ಮಾದರಿಗಳಿದ್ದು, ಇಂತಹ ಸಂದರ್ಭಗಳಲ್ಲಿ ನಾವು ಕೂಡಾ ಅವುಗಳಲ್ಲಿ ಒಂದಾಗಲು ಬಯಸುವುದಿಲ್ಲ.

ಅದಕ್ಕೆ ಬದಲಾಗಿ, ಬೆಲೆ ಹೆಚ್ಚಳವಾದ್ರೂ ಪರವಾಗಿಲ್ಲ ಅತ್ಯುತ್ತಮ ಗುಣಮಟ್ಟದ ಕಾರು ಉತ್ಪನ್ನಗಳತ್ತ ಗ್ರಾಹಕರು ಆಕರ್ಷಣೆ ಆಗುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಕಾರು ಉತ್ಪಾದನೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲಿ ಸ್ಕೋಡಾ ತನ್ನ ವಿನೂತನ ಪ್ಯಾರ್ಟ್ ಫಾರ್ಮ್ ಮೇಲೆ ಫೋಕ್ಸ್ ವ್ಯಾಗನ್ ಕಾರುಗಳನ್ನು ಉತ್ಪಾದನೆ ಮಾಡಲಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ರಫ್ತು ಮಾಡುವ ಯೋಜನೆಯಲ್ಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯನಿಮಗೆಲ್ಲಾ ಗೊತ್ತಿರುವ ಹಾಗೆ ಉತ್ತಮ ಕಾರುಗಳಲ್ಲಿ ಫೋರ್ಕ್ಸ್ ವ್ಯಾಗನ್ ಕೂಡಾ ಜನಪ್ರಿಯತೆ ಸಾಧಿಸಿದ್ದು, ಇದು ಇತರೆ ಹ್ಯಾಚ್ ಬ್ಯಾಕ್ ಕಾರುಗಳಿಂತ ತುಸು ದುಬಾರಿ ಎನ್ನಿಸಲಿವೆ. ಇದೇ ಕಾರಣ ಅಗ್ಗದ ಬೆಲೆಯ ಕಾರುಗಳ ಉತ್ಪಾದನೆ ಮುಂದಾಗಿದ್ದ ಫೋಕ್ಸ್ ವ್ಯಾಗನ್ ಇದೀಗ ಮಾರುಕಟ್ಟೆಯಲ್ಲಿನ ಸನ್ನಿವೇಶಗಳನ್ನು ಅಧ್ಯಯನ ಮಾಡಿದ್ದಲ್ಲದೇ ಅಗ್ಗದ ಬೆಲೆಯ ಕಾರುಗಳ ಸಹವಾಸ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದೆ.

Leave A Reply

Your email address will not be published.