Ultimate magazine theme for WordPress.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾಗೆ 100 ಬಲಿ; 3967 ಹೊಸ ಪ್ರಕರಣ ದಾಖಲು

0

ನವ ದೆಹಲಿ (ಮೇ 15); ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,967 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, ಮಾರಕ ವೈರಸ್‌ಗೆ ದೇಶದಾದ್ಯಂತ 100 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಕಳೆದ ಒಂದು ವಾರದಿಂದ ದೇಶದಲ್ಲಿ ಕೊರೋನಾ ಸಾಮೂದಾಯಿಕವಾಗಿ ಅತ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈವರೆಗೆ ಒಟ್ಟು 81,970 ಜನ ಈ ವೈರಸ್‌ಗೆ ಬಾಧಿತರಾಗಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 2,649ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸುಮಾರು 27,920 ಜನ ಈ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಮಾರ್ಚ್ 25 ರಂದು ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಮೂರನೇ ಹಂತದ ಲಾಕ್ಡೌನ್ ಮೇ. 17ಕ್ಕೆ ಮುಕ್ತಾಯವಾಗಲಿದೆ. ಅಲ್ಲದೆ, ಈವರೆಗೆ ಹಂತ ಹಂತವಾಗಿ ಲಾಕ್‌ಡೌನ್ ಅನ್ನು ತೆರವುಗೊಳಿಸಲಾಗಿದ್ದು ಮೇ. 18 ರಿಂದ ವಿಮಾನಯಾನಕ್ಕೂ ಅವಕಾಶ ನೀಡಲಾಗಿದೆ.

Leave A Reply

Your email address will not be published.