Ultimate magazine theme for WordPress.

ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

0

ಕೋಯಿಮತ್ತೂರು, ಜೂನ್ 1: ತಮಿಳುನಾಡಿನ ಕೋಯಿಮತ್ತೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೈಕ್‌ ಕದ್ದ ಒಬ್ಬ ಕಳ್ಳ ಅದನ್ನು ಎರಡು ವಾರಗಳ ನಂತರ ಮಾಲೀಕರಿಗೆ ಪಾರ್ಸೆಲ್ ಮಾಡಿದ್ದಾನೆ. ಈ ಕಥೆ ಹಾಸ್ಯ ಎನಿಸಿದರೂ ನಿಜ.

ಸುರೇಶ್ ಕುಮಾರ್ ಎಂಬ ಕೋಯಿಮತ್ತೂರಿನ ವ್ಯಕ್ತಿ ತಮ್ಮದೇ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇವರ ಹೀರೋ ಹೊಂಡ ಸ್ಪೆಂಡರ್ ಬೈಕ್‌ಅನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದ. ನಂತರ ಆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆದರೆ, ಕಳ್ಳತನ ಮಾಡಿದ ಎರಡು ವಾರಗಳಲ್ಲಿ ಬೈಕ್‌ಅನ್ನು ಹಿಂತಿರುಗಿಸಿ ನೀಡಿದ್ದಾನೆ.

ಪ್ರಕರಣದ ಹಿಂದೆ ಹೋದ ಪೊಲೀಸರಿಗೆ ಸಿಸಿ ಟಿವಿ ಮೂಲಕ ಬೈಕ್‌ ಕದ್ದಿರುವುದು ತಿಳಿದುಬಂದಿದೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಕುಟುಂಬವನ್ನು ಸೇರಲು ಊರಿಗೆ ಹೋಗಲು, ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಪಾರ್ಸೆಲ್ ಆಫೀಸ್‌ನಿಂದ ಕರೆ ಬಂದಾಗ ಮಾಲೀಕ ಸುರೇಶ್‌ರಿಗೆ ಆಶ್ಚರ್ಯವಾಗಿದೆ. ಅಲ್ಲಿಗೆ ಹೋಗಿ ತಮ್ಮ ಬೈಕ್‌ ಅನ್ನು ಪಡೆದುಕೊಂಡಿದ್ದಾರೆ.

Leave A Reply

Your email address will not be published.