ಬೆಂಗಳೂರು,ಫೆಬ್ರವರಿ 15: ಬೆಂಗಳೂರಿನ ಒಂದೇ ಅಪಾರ್ಟ್ಮೆಂಟ್ನ 31 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬೊಮ್ಮನಹಳ್ಳಿ ಪ್ರದೇಶದ ಅಪಾರ್ಟ್ಮೆಂಟ್ ಒಂದರಲ್ಲಿ 31 ಮಂದಿಗೆ ಸೋಂಕು ತಗುಲಿದ್ದು ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಆ ಅಪಾರ್ಟ್ಮೆಂಟ್ನಲ್ಲಿ 475 ಫ್ಲ್ಯಾಟ್ಗಳಿದ್ದು, 2500ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ.ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 414 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 945270ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ ಕೊರೊನಾವೈರಸ್ ನಿಂದ ಇಬ್ಬರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12265ಕ್ಕೆ ಏರಿಕೆ ಆಗಿದೆ.