Ultimate magazine theme for WordPress.

ಬೆಂಗಳೂರಿನ ನಂತರ ಕೋಲಾರದಲ್ಲೂ ಕೇಳಿಬಂತು ಆ ನಿಗೂಢ ಶಬ್ದ

0

ಕೋಲಾರ, ಮೇ 20: ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಇಂದು ಮಧ್ಯಾಹ್ನ ಭಾರಿ ಶಬ್ದ ಕೇಳಿಸಿ ಆತಂಕ ಉಂಟಾದ ಬೆನ್ನಲ್ಲೇ ಕೋಲಾರದಲ್ಲೂ ಇಂಥದ್ದೇ ಶಬ್ದ ಕೇಳಿಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕಸಂದ್ರ ಗ್ರಾಮಸ್ಥರು ಈ ನಿಗೂಢ ಶಬ್ದ ಕೇಳಿ ಆತಂಕಗೊಂಡಿದ್ದಾರೆ. ಶಬ್ದದೊಂದಿಗೆ ಕಂಪನವೂ ಆಗಿದ್ದು, ಕಂಪನಕ್ಕೆ ಅಂಗಡಿಯ ಶೀಟ್ ಗಳು ಅಲುಗಾಡಿದ್ದು ಕಂಡುಬಂದಿದೆ.

ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಈ ಶಬ್ದ ಕೇಳಿಬಂದಿದ್ದು, ಸುಮಾರು 1 ನಿಮಿಷ 30 ಸೆಕೆಂಡ್ ವರೆಗೂ ಈ ವಿಚಿತ್ರ ಶಬ್ದ ಮುಂದುವರೆದಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ತುಂಬಿಕೊಂಡಿದೆ. ಬೆಂಗಳೂರಿನಲ್ಲೂ ಇಂದು ಮಧ್ಯಾಹ್ನ 1.20 ರಿಂದ 1.30 ರ ಸುಮಾರಿಗೆ ಇದೇ ರೀತಿ ನಿಗೂಢ ಶಬ್ದ ಕೇಳಿಬಂದಿತ್ತು. ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಬಂದಿತ್ತು. ಇದೀಗ ಕೋಲಾರದಲ್ಲೂ ಅಂಥದ್ದೇ ಅನುಭವವಾಗಿದೆ.

Leave A Reply

Your email address will not be published.