Ultimate magazine theme for WordPress.

ಬಿಯರ್ ಕೇಳೋವರೆ ಇಲ್ಲ, ಕಂಟ್ರಿ ಸಾರಾಯಿಯೇ ಎಲ್ಲಾ!

0

ಬೆಂಗಳೂರು, ಮೇ 22: ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ಅಬಕಾರಿ ಇಲಾಖೆ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಜಾರಿದೆ. 48 ದಿನ ಮದ್ಯ ಮಾರಾಟಕ್ಕೆ ಸಂಪೂರ್ಣ ತಡೆ ನೀಡಿದ್ದರಿಂದ ಆದಾಯಕ್ಕೆ ಕತ್ತರಿ ಬಿದ್ದಿದೆ.

ಬೊಕ್ಕಸಕ್ಕೆ ಹಣ ಹರಿದು ಬರಲಿ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಕೆಲವು ಷರತ್ತುಗಳ ಮೇಲೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಬಿಯರ್ ಮಾರಾಟ ಸಂಪೂರ್ಣ ಕುಸಿದಿರುವುದಾಗಿ ಅಬಕಾರಿ ಇಲಾಖೆ ಹೇಳಿದೆ

ಲಾಕ್‌ಡೌನ್ ನಿಂದ ಜನ ಮನೆಯಲ್ಲಿದ್ದಾರೆ. ಬಾರ್, ಪಬ್‌ಗಳು ಮುಚ್ಚಿವೆ. ಇದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಹೋದಂತಾಗಿದೆ. ಕಳೆದ ವರ್ಷದ ಮೇ 1 ರಿಂದ 20 ರವರೆಗೆ 21.31 ಲಕ್ಷ ಬಿಯರ್ ಬಾಕ್ಸ (ಕೇಸ್) ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 7.76 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿವೆ.

ಬಿಯರ್ ಮಾರಾಟದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆ ಕಾಣುವುದಕ್ಕೆ ಕೊರೊನಾ ಲಾಕ್‌ಡೌನ್ ಬಹುಮುಖ್ಯ ಕಾರಣವಾಗಿದೆ. ಬಾರ್ ರೆಸ್ಟೊರಂಟ್‌ ಹಾಗೂ ಪಬ್ ಗಳು ಮುಚ್ಚಿರುವುದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಉಳಿಯುವಂತಾಗಿದೆ. ಅಲ್ಲದೇ, ಬಿಯರ್ ದರವೂ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. ದೇಶಿ ಮದ್ಯವೇ ಜಾಸ್ತಿ ಮಾರಾಟವಾಗುತ್ತಿದೆ.

Leave A Reply

Your email address will not be published.