Ultimate magazine theme for WordPress.

ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

0

ಬೀಜಿಂಗ್, ಮೇ 22: ಜಗತ್ತಿನಾದ್ಯಂತ 3 ಲಕ್ಷಕ್ಕೂ ಅಧಿಕ ಜನರ ಜೀವ ನುಂಗಿರುವ ಮಾರಣಾಂತಿಕ ಕೊರೊನಾ ವೈರಸ್ ‘ಮೂಲ’ದ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ವುಹಾನ್ ಲ್ಯಾಬ್ ನಿಂದ ನೋವೆಲ್ ಕೊರೊನಾ ವೈರಸ್ ಲೀಕ್ ಆಗಿದೆ ಅಂತ ಕೆಲವರು ವಾದಿಸಿದರೆ, ವುಹಾನ್ ನಲ್ಲಿರುವ ಕುಖ್ಯಾತ ಮಾಂಸ ಮಾರುಕಟ್ಟೆಯಿಂದಲೇ ನೋವೆಲ್ ಕೊರೊನಾ ವೈರಸ್ ಮನುಷ್ಯರಿಗೆ ಹಬ್ಬಿದೆ ಎಂಬುದು ಹಲವರ ಪ್ರತಿವಾದ.

ವುಹಾನ್ ನ ‘ವೆಟ್ ಮಾರ್ಕೆಟ್’ ವಿರುದ್ಧವೇ ಹಲವು ದೇಶಗಳು ಬೆಟ್ಟು ಮಾಡಿ ತೋರಿಸುತ್ತಿದ್ದರೂ, ಅದನ್ನ ಇತ್ತೀಚೆಗಷ್ಟೇ ಮತ್ತೆ ತೆರೆಯಲಾಗಿತ್ತು.

”ಆ ಮಾಂಸ ಮಾರುಕಟ್ಟೆಯನ್ನು ಮೊದಲು ಬಂದ್ ಮಾಡಬೇಕು. ಪ್ರಾಣಿಗಳಿಂದ ಮನುಷ್ಯರಿಗೆ ಎಷ್ಟೊಂದು ಕಾಯಿಲೆ ಬಂದಿರುವಾಗ, ಅದನ್ನ ಏಕೆ ತೆರೆಯಬೇಕು” ಎಂದು ಅಮೇರಿಕಾದ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆಂಥೋನಿ ಫೌಸಿ ಕೂಡ ಕಿಡಿಕಾರಿದ್ದರು.

ಇದಾದ ಬಳಿಕ ಕಾಡುಪ್ರಾಣಿಗಳ ಮಾಂಸ ಸೇವನೆಯನ್ನು ವುಹಾನ್ ನಿಷೇಧಿಸಿತು. ಇದೀಗ ಸಿಂಹ, ಹುಲಿ, ಬಾವಲಿ, ನವಿಲು ಮತ್ತು ಪ್ಯಾಂಗೋಲಿನ್ ಮಾಂಸ ಸೇವನೆಯ ಮೇಲೂ ವುಹಾನ್ ನಿಷೇಧ ಹೇರಿದೆ.

ಕೋವಿಡ್-19 ನ ಮೊದಲ ಕೆಲ ಪ್ರಕರಣಗಳು ವುಹಾನ್ ನ ವೆಟ್ ಮಾರ್ಕೆಟ್ ನಿಂದಲೇ ಪತ್ತೆಯಾಗಿರುವ ಕಾರಣ ಕಾಡುಪ್ರಾಣಿಗಳ ಮಾಂಸ ಸೇವನೆಯನ್ನು ವುಹಾನ್ ನ ಮುನಿಸಿಪಾಲ್ ಗವರ್ನ್ಮೆಂಟ್ ನಿಷೇಧಿಸಿದೆ. ಇದರ ಅನ್ವಯ ಸಿಂಹ, ಹುಲಿ, ಬಾವಲಿ, ನವಿಲು, ಪ್ಯಾಂಗೋಲಿನ್, ಹಾವು ಮುಂತಾದ ವನ್ಯಜೀವಿಗಳ ಮಾಂಸವನ್ನು ಯಾರೂ ಮಾರುವಂತಿಲ್ಲ, ಸೇವಿಸುವಂತಿಲ್ಲ. ಈ ನಿಯಮ ಮುಂದಿನ ಐದು ವರ್ಷಗಳವರೆಗೆ ಚಾಲ್ತಿಯಲ್ಲಿರಲಿದೆ.

Leave A Reply

Your email address will not be published.