ಕೊರೊನಾ ವೈರಸ್ ಭಾರತದಿಂದ ಮೇ ಮಾಸಾಂತ್ಯಕ್ಕೆ ತೊಲಗುತ್ತದೆ ಎನ್ನುವ ಮಹೂರ್ತವನ್ನು ಹೆಚ್ಚಿನ ಜ್ಯೋತಿಷಿಗಳು ಫಿಕ್ಸ್ ಮಾಡಿದ್ದರು. ಅದರಲ್ಲಿ ಬಾಲ ಜ್ಯೋತಿಷಿ ಎಂದೇ ಹೆಸರು ಪಡೆದಿರುವ ಅಭಿಗ್ಯಾ ಆನಂದ್ ಕೂಡಾ ಒಬ್ಬರು.
ಆದರೆ, ಕೊರೊನಾ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಾಸ್ತವತೆ. ಎಲ್ಲಿ ಕೊರೊನಾ ಹುಟ್ಟಿತ್ತೋ ಆ ದೇಶದ ಸಾವಿನ ಸಂಖ್ಯೆಯನ್ನೂ ಭಾರತ ಮೀರಿಸಿದ್ದಾಗಿದೆ. ಇವೆಲ್ಲದರ ನಡುವೆ, ಲಾಕ್ ಡೌನ್ ಸಡಿಲಗೊಳ್ಳುತ್ತಾ ಸಾಗುತ್ತಿದೆ.
“ಮೇ 29ರ ನಂತರ ಕೊರೊನಾ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ”ಎಂದು ಅಭಿಗ್ಯಾ ನುಡಿದಿದ್ದರು.
ಈಗ ನಾಲ್ಕು ದಿನಗಳ ಕೆಳಗೆ ಅಂದರೆ ಮೇ 26ಕ್ಕೆ ಅಪ್ಲೋಡ್ ಮಾಡಲಾಗಿರುವ ಹೊಸ ವಿಡಿಯೋದಲ್ಲಿ ಅಭಿಗ್ಯಾ, ಕೊರೊನಾ ತೊಲಗುವ ಹೊಸ ಡೇಟ್ ಅನ್ನು ಕೊಟ್ಟಿದ್ದಾರೆ. ಜೊತೆಗೆ, ವರ್ಷಾಂತ್ಯಕ್ಕೆ ಇನ್ನೊಂದು ಕಂಟಕ ಎದುರಾಗಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದನ್ನು ನಂಬುವುದು, ಬಿಡುವುದು, ಅವರವರ ವಿವೇಚನೆಗೆ ಬಿಟ್ಟ ವಿಚಾರ. ಅಭಿಗ್ಯಾ ನುಡಿದ ಭವಿಷ್ಯ ಹೀಗಿದೆ: