Ultimate magazine theme for WordPress.

‘ಪಾಕ್’ ಪಾರಿವಾಳದ ಕಾಲಿನಲ್ಲಿದ್ದ ‘ರಹಸ್ಯ’ ರಶೀದಿಯಲ್ಲಿ ಬರೆದಿದ್ದೇನು?

0

ಇಸ್ಲಮಾಬಾದ್, ಮೇ.28: ಭಾರತದ ರಹಸ್ಯ ಮಾಹಿತಿಗಳನ್ನು ಪಡೆಯುವುದಕ್ಕೆ ಪಾಕಿಸ್ತಾನ ಎಲ್ಲಿಲ್ಲದ ತಲೆ ಓಡಿಸುತ್ತಿರುತ್ತದೆ. ಉಗ್ರ ಸಂಘಟನೆಗಳನ್ನು ಎತ್ತಿ ಕಟ್ಟುವುದು, ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುವುದು. ಇದರ ನಡುವೆ ಪಾಕ್ ಮತ್ತೊಂದು ಗೌಪ್ಯ ಮಾರ್ಗ ಕಂಡುಕೊಂಡಂತೆ ಕಾಣುತ್ತಿದೆ.

ಭಾರತೀಯ ಗಡಿರೇಖೆಯಲ್ಲಿ ಪಾರಿವಾಳಗಳನ್ನು ಹಾರಿ ಬಿಡುತ್ತಿರುವ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಆದರೆ ಪಾರಿವಾಳನ್ನು ತಾನೇ ಹಾರಿ ಬಿಟ್ಟಿರುವುದಾಗಿ ಪಾಕಿಸ್ತಾನ ಮೂಲದ ಹಬೀಬುಲ್ಲಾ ಎಂಬುವವರು ಒಪ್ಪಿಕೊಂಡಿದ್ದಾರೆ.

ಭಾರತದ ಗಡಿ ಪ್ರದೇಶದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ವಾಸವಿರುವ ಹಬೀಬುಲ್ಲಾ, ರಂಜಾನ್ ಹಬ್ಬದ ಸಂಭ್ರಮದ ಸಂಕೇತವಾಗಿ ಈ ಪಾರಿವಾಳವನ್ನು ಹಾರಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನದ ‘ಡಾನ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದ ಬಗ್ಗಾ-ಶಾಖಾಘರ್ ಗ್ರಾಮದ ಹಬೀಬುಲ್ಲಾ ಸ್ವತಃ ತಾವೇ ಪಾರಿವಾಳವನ್ನು ಹಾರಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. 12ಕ್ಕೂ ಹೆಚ್ಚು ಪಾರಿವಾಳಗಳನ್ನು ಸಾಕುತ್ತಿರುವ ವ್ಯಕ್ತಿ, ರಂಜಾನ್ ಹಬ್ಬದ ಸಂಭ್ರಮದಲ್ಲಿ ಶಾಂತಿಯ ಸಂಕೇತವಾಗಿ ಪಾರಿವಾಳವನ್ನು ಹಾರಿ ಬಿಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.