Ultimate magazine theme for WordPress.

ಪಾಕಿಸ್ತಾನ: 100 ಮಂದಿ ಪ್ರಯಾಣಿಕರಿದ್ದ ಪಿಐಎ ವಿಮಾನ ಪತನ

0

ಲಾಹೋರ್, ಮೇ 22: ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ ಎ320 ಪತನಗೊಂಡಿದೆ. ಲಾಹೋರ್‌ನಿಂದ ಹೊರಟಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದ ಸಮೀಪ ಅಪಘಾತ ಉಂಟಾಗಿದೆ. ವಿಮಾನದಲ್ಲಿ ಒಟ್ಟು 100 ಮಂದಿ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ಮಾಡೆಲ್ ಕಾಲೊನಿ ಬಳಿ ಪತನಗೊಂಡಿದೆ.

ಇದು ಲಾಹೋರ್‌ನ ಅಲ್ಲಮ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನ ನಿಲ್ದಾಣವು ನಾಲ್ಕು ಕಿ.ಮೀ ದೂರದಲ್ಲಿರುವಾಗ ಪತನಗೊಂಡಿದೆ. ಪತನದ ಬಳಿಕ ದಟ್ಟ ಹೊಗೆ ಕಾಣಿಸಿಕೊಂಡಿತ್ತು.

ಆ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.

Leave A Reply

Your email address will not be published.