Ultimate magazine theme for WordPress.

ಪರಿಹಾರ ಘೋಷಿಸಿದ್ದೀರಿ, ಆದರೆ ಫಲಾನುಭವಿಗಳನ್ನ ಗುರುತಿಸಿದ್ದೀರಾ?: ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆ

0

ನವದೆಹಲಿ(ಮೇ 10): ಲಾಕ್ ಡೌನ್ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕವಾಗಿಲ್ಲ. ಜನರಿಗೆ ವಂಚನೆ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಕೊರೋನಾ ಬಿಕ್ಕಟ್ಟಿನಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲೂ ಲೂಟಿ ಹೊಡೆಯುವ ಕೆಲಸ ಮಾಡಬೇಡಿ ಎಂದು ಹೆಚ್​ಡಿಕೆ ತಾಕೀತು ಮಾಡಿದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಜಿ. ಕೃಷ್ಣಮೂರ್ತಿ ಅವರಿಂದ ಆಯೋಜಿಸಲಾದ 15 ಸಾವಿರ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.

ಇವತ್ತು ದಾನಿಗಳಿಂದ ಬಡವರು ಉಳಿದಿದ್ದಾರೆಯೇ ಹೊರತು ಸರ್ಕಾರದಿಂದ ಅಲ್ಲ ಎಂದು ಹೇಳಿದ ಅವರು ಸರ್ಕಾರದ ಯೋಜನೆಗಳಿಂದ ನಿಜವಾದ ಫಲಾನುಭವಿಗಳಿಗೆ ಸಹಾಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ, ಆ ವರ್ಗದ ಜನರನ್ನು, ನಿಜವಾದ ಫಲಾನುಭವಿಗಳನ್ನ ಗುರುತಿಸುವ ಕೆಲಸ ಆಗಿದೆಯಾ? ಯಾರಿಗೆಂದು ನೀವು ಪರಿಹಾರ ತಲುಪಿಸುತ್ತೀರಾ? 1,600 ಕೋಟಿ ರೂ ಪ್ಯಾಕೇಜ್ ಘೋಷಿಸುವ ಮುನ್ನ ಪೂರ್ವ ತಯಾರಿ ಮಾಡಿಕೊಂಡಿದ್ದೀರಾ? ಎಂದು ಸರ್ಕಾರದ ನೀತಿಯನ್ನು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

Leave A Reply

Your email address will not be published.