ನವದೆಹಲಿ, ಫೆಬ್ರವರಿ 22: ಪತಂಜಲಿ ಬಿಡುಗಡೆ ಮಾಡಿರುವ ಕೊರೋನಿಲ್ ಮಾತ್ರೆಗಳು ಕೊರೊನಾ ಸೋಂಕು ಗುಣಪಡಿಸಬಲ್ಲದು. ಸಂಶೋಧನೆಗಳಲ್ಲಿ ಇದು ಸಾಬೀತಾಗಿದ್ದು, ಕೊರೋನಿಲ್ ಔಷಧಿ ಕೋವಿಡ್ -19ಗೆ ಪುರಾವೆ ಆಧಾರಿತ ಔಷಧ ಎಂದು ಶುಕ್ರವಾರ ಯೋಗಗುರು ಬಾಬಾ ರಾಮ್ದೇವ್ ಕೊರೋನಿಲ್ ಔಷಧಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಕುರಿತು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಸಚಿವರಿಗೆ ಪ್ರಶ್ನೆ ಮಾಡಿದೆ. ಪತಂಜಲಿಯ ಕೊರೋನಿಲ್ ಔಷಧಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ ಕಾರಣಕ್ಕೆ ವಾಗ್ದಾಳಿ ನಡೆಸಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಾವಳಿ ಪ್ರಕಾರ ಯಾವುದೇ ವೈದ್ಯರು ಯಾವುದೇ ಔಷಧವನ್ನು ಪ್ರಚಾರ ಮಾಡುವಂತಿಲ್ಲ. ಆದರೆ ಸ್ವತಃ ವೈದ್ಯರಾಗಿರುವ ಆರೋಗ್ಯ ಸಚಿವರೇ ಕೊರೊನಿಲ್ ಔಷಧಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಶ್ಚರ್ಯಕರವಾಗಿದೆ ಎಂದು ಐಎಂಎ ತಿಳಿಸಿದೆ. ಮುಂದೆ ಓದಿ…