ಬೆಂಗಳೂರು, ಮೇ 20 : ಕರ್ನಾಟಕದ ಪಂಚಾಯತ್ ರಾಜ್ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲಾಗಿದೆ. ಕೆಲವೇ ತಿಂಗಳಿನಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್ ರಾಜ್ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು 2019ರ ಕರಡನ್ನು ಸರ್ಕಾರ ರಚಿಸಲು ಪ್ರಸ್ತಾಪಿಸಲಾಗಿದೆ. ಕರಡು ಅಧಿಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಒಟ್ಟು 7021 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 4ನೇ ಹಂತದ ಲಾಕ್ ಡೌನ್ ಮುಗಿದ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ 30, ಉಪ ಕಾರ್ಯದರ್ಶಿ (ಪಂಚಾಯತ್ ರಾಜ್) 69, ಮುಖ್ಯ ಲೆಕ್ಕಾಧಿಕಾರಿ 30, ಮುಖ್ಯ ಯೋಜನಾಧಿಕಾರಿ 30, ಸಹಾಯಕ ಕಾರ್ಯದರ್ಶಿ/ಕಾರ್ಯ ನಿರ್ವಾಹಕ ಅಧಿಕಾರಿ 265.