Ultimate magazine theme for WordPress.

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಸಂದರ್ಶನದ ವೇಳೆ ತೀವ್ರ ಭೂಕಂಪ

0

ವೆಲ್ಲಿಂಗ್ಟನ್, ಮೇ 25: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ತೀವ್ರ ಭೂಕಂಪ ಸಂಭವಿಸಿದೆ.

ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ ಸಂದರ್ಶನ ನೀಡುತ್ತಿದ್ದಾಗ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಒಮ್ಮೆ ಗಾಬರಿಗೊಂಡು, ಬಳಿಕ ಸಂದರ್ಶನವನ್ನು ಮುಂದುವರೆಸಿದರು.

ಜಸಿಂಡಾ ಅವರು 2017 ರಿಂದ ನ್ಯೂಜಿಲೆಂಡ್‌ನ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರದಿಂದಲೇ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ನ್ಯೂಜಿಲೆಂಡ್‌ನ ಚರ್ಚ್‌ನಲ್ಲಿ ನಡೆದ ಮಾಸ್ ಶೂಟಿಂಗ್ ಬಳಿಕ ವಿಚಾರದಲ್ಲಿ ಅವರು ತೆಗೆದುಕೊಂಡ ನಿರ್ಧಾರ, ಕೊರೊನಾ ವೈರಸ್ ಹೋಗಲಾಡಿಸಲು ತೆಗೆದುಕೊಂಡ ನಿರ್ಧಾರಗಳು ಜನರಿಗೆ ಖುಷಿ ತಂದಿದೆ.

ವಿಲ್ಲಿಂಗ್ಟನ್ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಲೆವಿನ್ ಇದರ ಕೇಂದ್ರಬಿಂದುವಾಗಿದೆ. 37 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪ ಸಂಭವಿಸಿದಾಗ ಅವರ ಭಾವನೆ ಹೇಗಿತ್ತು ಎಂಬುದರ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 30 ಸೆಕೆಂಡುಗಳ ಕಾಲ ಭಯ ಎದುರಿಸಬೇಕಾಯಿತು. ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.

Leave A Reply

Your email address will not be published.